ದಿನದ ಸುದ್ದಿ

ಇಂದು ತುಮಕೂರಿಗೆ ನಡೆದಾಡುವ ದೇವರು ವಾಪಾಸ್ ; ಮಠದಲ್ಲಿ ಪೊಲೀಸ್ ಬಿಗಿಬಂದೋಬಸ್ತ್

Published

on

ಸುದ್ದಿದಿನ ಡೆಸ್ಕ್ : ಸಿದ್ದಗಂಗಾ ಶ್ರೀ ಸ್ವಾಮೀಜಿ ಕರೆದೊಯ್ಯಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳು ನಡೆದಿದ್ದು, ಚೆನ್ನೈ ಪೊಲೀಸರು ರೇಲಾ ಆಸ್ಪತ್ರೆಗೆ ಆಗಮಿಸಿದ್ದಾರೆ. ಸ್ವಾಮೀಜಿಯನ್ನು ಕರೆದೊಯ್ಯಲು ಎರಡು ಆಂಬುಲೆನ್ಸ್ ಗಳು ತಯಾರಿವೆ. ಜೀರೋ ಟ್ರಾಫಿಕ್ ಮೂಲಕ ಸ್ವಾಮೀಜಿಯನ್ನು ಏರ್ಪೋರ್ಟ್ ಕರೆದೊಯ್ಯಲಿದ್ದಾರೆ.ಆರೋಗ್ಯದಲ್ಲಿ.ಚೇತರಿಕೆ ಹಿನ್ನೆಲೆಯಲ್ಲಿ ಇಂದು ಮಠಕ್ಕೆ ವಾಪಸ್ ಆಗಲಿರುವ ಶ್ರೀಗಳು ಏರ್ ಆಂಬ್ಯಲೆನ್ಸ್ ನಲ್ಲಿ ತುಮಕೂರಿಗೆ ವಾಪಸ್ ಆಗಲಿದ್ದು, ನಾಳೆ ತುಮಕೂರಿನ ಸಿದ್ದಗಂಗಾ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಬಿಗಿ ಬಂದೋಬಸ್ತ್

ಇಂದು ಶ್ರೀಗಳು ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುವ ಸಂಭವವಿದ್ದು, ಶ್ರೀಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಗೆ ಎಸ್ಪಿ ದಿವ್ಯಾ ಗೋಪಿನಾಥ್ ರಿಂದ ಸಕಲ ಸಿದ್ದತೆ ನಡೆಸಿದ್ದಾರೆ.ಸ್ಥಳ ಪರೀಶೀಲನೆ ನಡೆಸಿ ನಿಗವಹಿಸುವಂತೆ ಎಸ್ಪಿ ಸೂಚನೆ ನೀಡಿದ್ದಾರೆ.

ಸಕಲ‌ ಸಿದ್ಧತೆ

ಶ್ರೀಗಳು ಮಠಕ್ಕೆ ಆಗಮಿಸುವ ಹಿನ್ನೆಲೆ ಸಿದ್ದಗಂಗಾ ಆಸ್ಪತ್ರೆ ವೈದ್ಯರಿಂದ‌ ಶ್ರೀಮಠದಲ್ಲಿ ಸಕಲ ಸಿದ್ದತೆ ನಡೆದಿದೆ. ಔಷಧಗಳನ್ನು ಹಿಡಿದು ಶ್ರೀಮಠಕ್ಕೆ ಆಗಮಿಸುತ್ತಿದೆ ಆಸ್ಪತ್ರೆಯ ತಂಡ. ಇಂದು ಸಿದ್ದಗಂಗಾ ಮಠದಲ್ಲೇ ಉಳಿಯಲಿರುವ ಶ್ರೀಗಳು ನಾಳೆ ನಗರದ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version