ದಿನದ ಸುದ್ದಿ

ಬೆಂಗಳೂರು : ಮತಬೇಟೆಯಲ್ಲಿ ಸಿದ್ದರಾಮಯ್ಯ..!

Published

on

ಸುದ್ದಿದಿನ, ಬೆಂಗಳೂರು : ಗಾಂಧಿನಗರ ಹಾಗೂ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಯುವ ಉತ್ಸಾಹಿ ನಾಯಕ. ಸಂವಿಧಾನದ ಆಶಯಗಳಲ್ಲಿ ನಂಬಿಕೆಯಿಟ್ಟಿರುವ ಇಂತಹ ಯುವಕರು ಸಂಸತ್ತಿಗೆ ಹೋದಾಗಲೇ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು.

ಹಾಗೆ ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು, ಕೃಷ್ಣಬೈರೇಗೌಡರು ಹಿಂದಿನ ನನ್ನ ಹಾಗೂ ಈಗಿನ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿ ಅತ್ಯಂತ ದಕ್ಷ, ಪ್ರಮಾಣಿಕ ಸಚಿವರು ಎಂದು ಗುರುತಿಸಿಕೊಂಡವರು. ಉಜ್ವಲ ಭಾರತಕ್ಕಾಗಿ ಇಂಥ ಕ್ರಿಯಾಶೀಲ ವ್ಯಕ್ತಿಗಳು ಸಂಸತ್ತು ಪ್ರವೇಶಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version