ರಾಜಕೀಯ

ಸುಮಲತ ಅಂಬರೀಶ್ ಸಿದ್ದರಾಮಯ್ಯ ಭೇಟಿ : ಸ್ವತಂತ್ರ ಅಭ್ಯರ್ಥಿಯಾಗಿ ಲೋಕ ಸಭೆಗೆ ಸುಮಲತಾ ಸ್ಪರ್ಧೆ..!?

Published

on

ಸುದ್ದಿದಿನ, ಬೆಂಗಳೂರು : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಲ್ಲಿನ ಜನತೆ ಅಪಾರವಾದ ಪ್ರಮಾಣದಲ್ಲಿ ಪ್ರೀತಿಯಿಂದ ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಲ್ಲಿ ಜನತೆಯ ಅಪೇಕ್ಷೆ, ಅಭಿಪ್ರಾಯವನ್ನು ನನ್ನ ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಮನ್ವಯ ಸಮಿತಿಯ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ ಎಂದು ಸುಮಲತ ಅಂಬರೀಶ್ ಹೇಳಿದರು.

ಇಂದು (ಬುಧವಾರ) ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಭೇಟಿಮಾಡಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಅಂಬರೀಶ್ ಅಭಿಮಾನಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿದ ಕಾರಣ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಹಲವು ದಿನಗಳಿಂದ ಮಂಡ್ಯದ ಜನತೆ ಈ ವಿಷಯವಾಗಿ ಪ್ರಸ್ತಾಪವನ್ನು ಇಟ್ಟಿರುವುದು ನಿಮಗೇ ಗೊತ್ತಿದೆ. ಆದರೆ ನಾನು ಈ ವಿಷಯವಾಗಿ ಪ್ರತಿಕ್ರಿಯೆ ನೀಡದೆ ಇರುವುದು ಮಂಡ್ಯ ಜನತೆಗೆ ತಪ್ಪು ಮಾಹಿತಿ ಲಭಿಸಬಹಿದು. ಅವರ ಋಣ ನಮ್ಮ ಕುಟುಂಬದ ಮೇಲೆ ತುಂಬಾ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಜೆಡಿಎಸ್ ಅಭ್ಯರ್ಥಿಗೆ ಲೋಕಸಭಾ ಚುನಾವಣೆ ಟಿಕೆಟ್ ಘೋಷಣೆಯಾದರೆ,ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮಂಡ್ಯ ಜನತೆ ಅಭಿಪ್ರಾಯ ಪಟ್ಟಿದ್ದು ಈ ವಿಷಯವಾಗಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಯಿತು ಎಂದರು.

ಸಿದ್ದರಾಮಯ್ಯ ಅವರು ಈ ವಿಷಯವಾಗಿ ಹೈ ಕಮಾಂಡ್ ಜತೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version