ದಿನದ ಸುದ್ದಿ

ವಿಡಿಯೋ : ನಿಖಿಲ್ ಗೆಲುವಿಗೆ ನಾಳೆ ನಾನು ಮತ್ತು ದೇವೇಗೌಡರು ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದೇವೆ : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಕೆಲ‌ ದಿನಗಳ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.

ಈ ಭೇಟಿಯು ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಸುಮಲತಾ ಪರ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಸೂಚಿಸಿದ್ದು, ನಿಖಿಲ್ ತೀವ್ರ ಮುಖಭಂಗವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಪ್ರಚಾರಕ್ಕೆ ಬರುವಂತೆ ಸಿದ್ದರಾಮಯ್ಯ ಅವರೊಂದಿಗೆ ‌ನಿಖಿಲ್ ಚರ್ಚೊಸಿದ್ದರು.

ಅಂದಹಾಗೆ ಸಿದ್ದರಾಮಯ್ಯ ಅವರು ಈ ವಿಡಿಯೋದಲ್ಲಿ ಹೇಳುವಂತೆ ” ಮೈತ್ರಿ ಅಭ್ಯರ್ಥಿಯಾದ ನಿಖಿಲ್ ಕುಮಾರ ಸ್ವಾಮಿಯರವ ಗೆಲುವಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸ ಬೇಕಿದೆ ಎಂದಿದ್ದಾರೆ. ಹಾಗೆ ಮಂಡ್ಯ ಜನತೆಯೂ ಕೂಡ ನಿಖಿಲ್ ಗೆ ಮತಹಾಕಿ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಹಾಗೇ ನಾನು ಮತ್ತು ದೇವೇಗೌಡರು ಏಪ್ರಿಲ್ 12ನೇ ತಾರೀಖು ಒಟ್ಟಾಗಿ ಪ್ರಚಾರ ಮಾಡುತ್ತೇವೆ ಎಂದಿದ್ದಾರೆ”.

Trending

Exit mobile version