ದಿನದ ಸುದ್ದಿ
ಜನವಿರೋಧಿ ಬಿಜೆಪಿ ಸೋಲಿಸುವುದು ನಮ್ಮ ಗುರಿ : ಸಿದ್ದರಾಮಯ್ಯ
ಸುದ್ದಿದಿನ ಡೆಸ್ಕ್ : ಚುನಾವಣೆಯ ಕಾಲದಲ್ಲಿ ಕಿವಿಕೊಡಬೇಕಾಗಿರುವುದು ವದಂತಿಗಳಿಗಲ್ಲ, ನಮ್ಮೆದೆಯ ದನಿಗೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ.
ಇದು ವಿರೋಧಿಗಳ ಸಂಚು. ದಯವಿಟ್ಟು ಇದಕ್ಕೆ ಕಿವಿಗೊಡಬೇಡಿ. ನಮ್ಮ ಏಕೈಕ ಗುರಿ ಜನವಿರೋಧಿ ಮತ್ತು ವಚನಭ್ರಷ್ಟ ಬಿಜೆಪಿಯನ್ನ ಸೋಲಿಸುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜಕೀಯ ಬೆಳವಣಿಗೆಗಳಲ್ಲಿ ವೈಯಕ್ತಿಕ ಸಂಬಂಧಗಳು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಆಗಾಗ ಏರುಪೇರುಗಳಾಗುತ್ತವೆ. ಅಂತಿಮವಾಗಿ ರಾಜಕೀಯ ಸಂಬಂಧವನ್ನು ನಿರ್ದೇಶಿಸುವುದು ಸಿದ್ಧಾಂತ.
ನಾನು ಮತ್ತು ಸಚಿವ ಜಿ.ಟಿ.ದೇವೇಗೌಡ ಜಾತ್ಯತೀತ ತತ್ವಕ್ಕೆ ಬದ್ದವಾಗಿರುವವರು. ಬಿಜೆಪಿ ಸೋಲಿಗಾಗಿ ನಾವೆಲ್ಲ ಜತೆಯಲ್ಲಿ ಹೆಜ್ಜೆ ಹಾಕೋಣ ಎಂದು ಕರೆನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243