/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಲೈವ್ ಸ್ಯಾಟಲೈಟ್ ಹೊಡೆದುರುಳಿಸಿದ ಸಾಧನೆ ಮೋದಿಯದ್ದಲ್ಲ ನೆನಪಿರಲಿ : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ ಡೆಸ್ಕ್ : ಉಪಗ್ರಹ ನಿಗ್ರಹ ಕ್ಷಿಪಣಿಯ ಸಫಲ‌ ಪ್ರಯೋಗ ವಿಜ್ಞಾನಿಗಳ ಸಾಧನೆ, ದೇಶದ ಸಾಧನೆ. ಅದು ಒಂದು ಪಕ್ಷ, ಸರ್ಕಾರ ಇಲ್ಲವೆ ಪ್ರಧಾನಿಯದ್ದಲ್ಲ, ನೆನಪಿರಲಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅಭಿನಂದನೆ ಸಲ್ಲಬೇಕಾಗಿರುವುದು ವರ್ಷಗಳ ಕಾಲ ಈ ಒಂದು ತಂತ್ರಜ್ಞಾನದ ಅಭಿವದ್ಧಿಗಾಗಿ ಹಗಲಿರುಳು ಶ್ರಮಿಸಿದ ವಿಜ್ಞಾನಿಗಳು ಮತ್ತು ಇಂತಹದ್ದೊಂದು ಮುನ್ನೋಟ ಇಟ್ಟುಕೊಂಡು ಡಿಆರ್ ಡಿಒ ದ ಪ್ರಯತ್ನಕ್ಕೆ ಒತ್ತಾಸೆಯಾಗಿ ನಿಂತ ಹಿಂದಿನ ಪ್ರಧಾನ ಮಂತ್ರಿಗಳಿಗೆ‌ ಎಂದಿದ್ದಾರೆ.

ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಆಗಿನ ರಕ್ಷಣಾ ಇಲಾಖೆಯ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ.ವಿ.ಕೆ.ಸಾರಸ್ವತ್ ಉಪಗ್ರಹ ನಿಗ್ರಹ ಕ್ಷಿಪಣಿ ನಿರ್ಮಾಣಕ್ಕೆ ಬೇಕಾದ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸುತ್ತಿರುವುದಾಗಿ ಪ್ರಕಟಿಸಿದ್ದರು.
ಅಭಿನಂದನೆ ಡಾ.ಮನಮೋಹನ್ ಸಿಂಗ್ ಅವರಿಗೂ ಸಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ‌.ಕಾಂ|ವಾಟ್ಸಾಪ್|9986715401

Trending

Exit mobile version