ದಿನದ ಸುದ್ದಿ

‘ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ’, ಯಾಕೆ ಗೊತ್ತಾ..?

Published

on

ಸುದ್ದಿದಿನ ಡೆಸ್ಕ್ : ನಿಯಮ ಉಲ್ಲಂಘಿಸಿ ಮನೆ ನಿರ್ಮಾಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ‌ ಎದುರಾಗಿದೆ.

ಮೈಸೂರು ಪೊಲೀಸ್ ಕಮೀಷನರ್‌ಗೆ ವರದಿ ಕೇಳಿದ ಪೊಲೀಸ್ ಮಹಾನಿರ್ದೇಶಕರು, ಪ್ರಕರಣ ಸಿಬಿಐಗೆ ವಹಿಸುವ ಕುರಿತು ಸ್ಪಷ್ಟ ಅಭಿಪ್ರಾಯ ಕೇಳಿ ಪತ್ರ ಬರೆದಿದ್ದಾರೆ. ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿದ್ದ ಹಿನ್ನೆಲೆ, ಮೈಸೂರಿನ ಗಂಗರಾಜು ಎಂಬುವರು ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು. ಜುಲೈ 23 ರಂದು ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಯಲ್ಲಿ ಪ್ರಗತಿ ಕಾರಣದ ಹಿನ್ನೆಲೆ ಡಿಐಜಿಗೆ ದೂರು ನೀಡಿದ್ದಾರೆ ಗಂಗರಾಜು.

1981 ರಲ್ಲಿ ಮೂಡಾ ಢಿನೋಟಿಫೈ ಮಾಡಿದ್ದ ಭೂಮಿಯಲ್ಲಿ ಮನೆ ನಿರ್ಮಿಸಿದ್ದರು ಸಿದ್ದರಾಮಯ್ಯನವರು, ವಿಜಯ ನಗರ 2 ನೇ ಹಂತದಲ್ಲಿ 10 ಗುಂಟೆ ಜಾಗದಲ್ಲಿ ನಿರ್ಮಾಣವಾಗಿದೆ ಈ ಮನೆ. 2003 ರಲ್ಲಿ ಇದೇ ಮನೆಯನ್ನು ಮಾರಾಟ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version