ಲೈಫ್ ಸ್ಟೈಲ್

ಇದು ‘ಸ್ಲೋಗನ್’ ಆಭರಣಗಳ ದರ್ಬಾರ್ ದುನಿಯಾ..!

Published

on

ಟ್ರೆಂಡ್‍ಅನ್ನೊದು ಚಕ್ರದ ತರಹ ಯಾವಾಗ ಯಾವುದು ಬದಲಾಗುತ್ತದೆ. ಎನ್ನುವುದು ಯಾರಿಗೂ ಊಹೆ ಮಾಡಲು ಸಾಧ್ಯವಿಲ್ಲ ರಾತ್ರಿ ಕಳೆದು ಹಗಲು ಬರುವುದೊರಳಗೆ ಟ್ರೆಂಡ್ ಬದಲಾಗುತ್ತದೆ, ಇಷ್ಟು ದಿನ ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಫೇಸ್ ಬುಕ್‍ನಲ್ಲಿ ಪೋಸ್ಟ್‍ಗಳನ್ನು ಹಾಕುತ್ತಿದ್ದರು.

ಕಾಲ ಬದಲಾದಂತೆ ವಾಟ್ಸ್‍ಪ್‍ನ ಸ್ಟೇಟಸ್, ಡಿಪಿಗಳ ಮೂಲಕ ತಿಳಿಸುವುದು ನಾವು ನೋಡಿದ್ದೇವೆ ಆದರೆ ಟ್ರೆಂಡ್ ಮತ್ತೆ ಬದಲಾಗಿದೆ ಎಂದು ತೋರಿಸಲು ಸಜ್ಜಾಗಿ ನಿಂತಿದೆ ಅದುವೇ ಸ್ಲೋಗನ್ ಆಭರಣಗಳು ಹೌದು ನೀವು ಕೇಳುತ್ತಿರುವುದು ಸರಿಯಾಗಿ ಸ್ಲೋಗನ್ ಹೊಂದಿರುವ ಹೇರ್‍ಕ್ಲಿಪ್, ನೆಕಲೇಸ್, ಕಿವಿಯೋಲೆ, ಬ್ರೆಸಲೇಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಪ್ರಿಟಿಗರ್ಲ್, ಏಂಜಲ್, ಸ್ವಿಟ್ 16, ಬ್ರೆವ್, ಪ್ರಿನ್ಸೆಸ್ ಲವ್, ಕೇರಿಂಗ್, ಸ್ಮೆಲ್ ಆಲ್‍ವೇಸ್, ಹಲೋ, ಎಸ್, ಕ್ರೆಜೀ, ಲಕ್, ಡ್ರೀಮ್ ಗರ್ಲ್, ಕ್ಯೂಟ್ ಹೀಗೆ ಪದಗಳನ್ನು ಒಳಗೊಂಡ ನೆಕ್ ಲೇಸ್, ಕಿವಿಯೋಲೆ ಹಾಗೂ ಬ್ರೆಸ್‍ಲೆಟ್ ಹೆರ್‍ಕ್ಲಿಪ್‍ಗಳು ಮಾರುಕಟ್ಟೆಗೆ ಬಂದಿವೆ.

ಸ್ಲೋಗನ್ ಹೇರ್ ಕ್ಲಿಪ್

ಬಣ್ಣಗಳ ಹಾಗೂ ಮುತ್ತಿನ ಕ್ರಿಸ್ಟಲ್ ಅಂಟಿಸಿರುವ ಕ್ಲಿಪ್‍ಗಳನ್ನು ಹಿಂದೆ ಬಳಸಿದ್ದಿರಿ ಈಗ ಬಂದಿರುವ ಸೋಗನ್ ಕ್ಲಿಪ್ ಅತಿ ಹೆಚ್ಚು ಟ್ರೆಂಡ್‍ನಲ್ಲಿವೆ. ಪ್ಲಾಸ್ಟಿಕ್ ಕ್ಲಿಪ್ ಮೇಲೆ ಸ್ಲೋಗನ್ ಹೇಳಿಕೆ ಅಂಟಿಸಿರುವುದು ತಗಡಿನ ಕ್ಲಿಪ್‍ಗಳ ಜೊತೆಗೆ ಇನ್ನು ತರಹ ತರಹ ಕ್ಲಿಪ್‍ಗಳು ಮಹಿಳೆಯರನ್ನು ಆಕರ್ಷಿಸಿವೆ.

ಸ್ಲೋಗನ್ ನೆಕ್‍ಲೇಸ್

ಲಾಂಗ್ ಮತ್ತು ಶಾರ್ಟ್ ಚೈನ್, ಸಿಂಗಲ್, ಡಬಲ್ ಹಾಗೂ ಮಲ್ಟಿ ಲೇಯರ್ ಚೈನ್, ಸ್ಲೋಗನ್ ನೆಕ್ ಪೀಸ್‍ಗಳಲ್ಲಿ ಹಲವಾರು ವೆರೈಟಿಗಳನ್ನು ಕಾಣಬಹುದು. ಇವುಗಳಲ್ಲಿ ಸಿಲ್ವರ್, ಗೋಲ್ಡ್ ಮೆಟಲ್‍ನಲ್ಲಿ ಕೂಡ ಲಭ್ಯವಿವೆ. ಅಷ್ಟೇ ಅಲ್ಲದೇ ಸರ್ಕಲ್, ಹಾರ್ಟ್, ಓವೆಲ್, ಸ್ಕಯರ್, ರೌಂಡ್, ಶೇಪ್‍ನಲ್ಲಿರುವ ಸ್ಲೋಗನ್ ನೆಕ್‍ಲೇಸ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಸ್ಲೋಗನ್ ಕಿವಿಯೋಲೆ

ಶೋಲ್ಡರ್ ಲೆಂತ್‍ನಲ್ಲಿರುವ ಸ್ಲೋಗನ್ ಕಿವಿಯೋಲೆ ಆಕರ್ಷಕವಾಗಿವೆ, ಇಷ್ಟೇ ಅಲ್ಲದೇ ರೌಂಡ್, ಸ್ಕಯರ್, ಓವಲ್ ಶೇಪ್‍ನಲ್ಲಿ ಹಾಗೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಟೆಕ್ಸ ಸ್ಟೆಫ್ಸ್ ಇರುವ ಮೀನಿಂಗ್ ಫುಲ್ ಸ್ಲೋಗನ್ ಕಿವಿಯೋಲೆಗಳು ಮಹಿಳೆಯರನ್ನು ಹೆಚ್ಚು ಸೆಳೆಯುತ್ತಿವೆ. ಹಾಗೂ ಈ ಸ್ಲೋಗನ್ ಕಿವಿಯೋಲೆಗಳು ಸಿಲ್ವರ್, ಗೋಲ್ಡ್, ಪ್ಲಾಟಿನಂನಲ್ಲಿ ಕೂಡ ಲಭ್ಯವಿವೆ.

ಸ್ಲೋಗನ್ ಬ್ರೆಸ್‍ಲೆಟ್

ಸ್ಲೋಗನ್ ಹೊಂದಿರುವ ಚಾಮ್ರ್ಸ್ ಬ್ರೆಸ್‍ಲೆಟ್, ಹಾರ್ಟ್, ರೌಂಡ್ ಸ್ಲೋಗನ್ ಬೇಸ್‍ಲೆಟ್‍ಗಳು ಎಲ್ಲರ ಗಮನ ಸೆಳೆದಿವೆ.

ನಿವೇದಿತಾ ಸುರೇಶ್ ಸೋಲಾಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version