ದಿನದ ಸುದ್ದಿ

ಜೀವನದ ಅಮೂಲ್ಯ ಸಮಯದ ಪರಿವೇ ಇಲ್ಲದೆ ಜಾಲತಾಣದಲ್ಲಿ ಮುಳುಗಿದ ಜನಸಾಮಾನ್ಯರು

Published

on

  • ಚಂದ್ರಿಕ ವಿ, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ವಿದ್ಯಾರ್ಥಿನಿ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ

ತ್ತೀಚಿನ ದಿನಗಳಲ್ಲಿ ನಾವು ನೋಡುವ ಮನಸ್ಥಿತಿಗಳು ತುಂಬಾ ಭಯಾನಕವಾಗುತ್ತಿರುವ ಸಂಗತಿಗಳು ಇಂದು ನಾವು ನೋಡಬಹುದು. ಪ್ರಸ್ತುತ ದಿನಗಳಲ್ಲಿ ಮನುಷ್ಯ-ಮನುಷ್ಯನ ನಡುವೆ ಒಂದು ಉತ್ತಮ ಸಂಬಂಧ ಜೀವನದ ಒಂದು ಬೇರು ಈ ಸಂಬಂಧ ಎಂದು ಬದುಕುತ್ತಿದರು.

ಹಾಗೆಯೇ ಪ್ರತಿಯೊಬ್ಬರೂ ಕೂಡ ಒಬ್ಬರಿಗೊಬ್ಬರು ಸಹಾಯ, ಪ್ರೀತಿ, ಅಭಿಮಾನ, ವಿಶ್ವಾಸದಿಂದ ಬದುಕುತ್ತಿದ್ದರು. ಜನ ಕಾಲ ಕಳೆದಂತೆ ಅಗತ್ಯಕೆ ತಕ್ಕಂತೆ ಮನುಷ್ಯನು ಕೂಡ ಬದಲಾಗುತ್ತಿರುವುದನ್ನು ಕಾಣಬಹುದು, ಇದೇ ಅವಿಭಕ್ತ ಕುಟುಂಬ ಭಯಸುತ್ತಿದ್ದ ಕಾಲದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿರುವುದು ನಮ್ಮ ಕಣ್ಣೆದುರು ನಡೆಯುತ್ತವೆ. ಇಂದು ಕುಟುಂಬಗಳು ಹೆಚ್ಚು ತಮ್ಮವರ ಜತೆ ಸಮಯವನ್ನು ಕಳೆಯುತಿರುತ್ತಿದ್ದರು.

ಆದರೆ, ಮೊಬೈಲ್ (ಜಂಗಮವಾಣಿ)
ಎಂಬ ಸಂಪರ್ಕಗಳು ಚಾಲ್ತಿಯಲ್ಲಿರುವ ಸಂದರ್ಭದಲ್ಲೂ ಕೂಡ ಕುಟುಂಬದ ಸಂಬಂಧಗಳು ಕಡಿಮೆಯಾಗುತ್ತಾ ಹೋಗುತ್ತಿವೆ, ಹೆಚ್ಚಿನ ಸಮಯವನ್ನು ಮೊಬೈಲ್ ಜಂಗಮ ವಾಣಿ) ಜತೆ ಕಳೆಯುವ ಜನ ತಾನು ತನ್ನವರ ಜತೆ ಕಳೆಯದಂತಾಗಿದೆ.

ಮೊಬೈಲ್ (ಜಂಗಮವಾಣಿ) ಎಂದಾಕ್ಷಣ ಕೇವಲ ಮಾತಾಡಲು ಬಳಸುವ ಸಂಪರ್ಕವಾಗದೇ, ಅದರಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣಗಳು ಬಳಸುವುದು ತಮ್ಮ ಅಮೂಲ್ಯವಾದ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವುದು ಇದರಿಂದ ತಮ್ಮ ವಯಕ್ತಿಕ ಜೀವನಕ್ಕೆ ಅದು ತೊಂದರೆಯೂ ಉಂಟಾಗುತ್ತದೆಂದು ಎಂಬುದು ಪರಿವೇ ಇಲ್ಲದೇ ವರ್ತಿಸುವಂಥವರು ಆಗಿದ್ದರೆ ಎನ್ನಬಹುದು.

ಚಂದ್ರಿಕ ವಿ

ಏನೇ ಕೆಲಸಗಳು ಕೊಟ್ಟರು ನಾವು ಸಾಮಾಜಿಕ ಜಾಲತಾಣಕ್ಕೆ ಪ್ರವೇಶವನ್ನು ನೀಡುವುದು ಅಭ್ಯಾಸ ವಾಗಿರುವುದು ನಗ್ನ ಸತ್ಯ, ಇನ್ನು ಲ ಜೀವನವನ್ನು ನಾವು ಸರಿಯಾಗಿ ಅರ್ಥಮಾಡಿಕೊಡುವ ಸಮಯ ತುಂಬಾ ಹತ್ತಿರ ಬರುವಂತದ್ದು ಆಗಿದೆ. ಆ ಸಮಯಕ್ಕೆ ನಾವು ಜೀವನದ ಅಮೂಲ್ಯ ಸಮಯವನ್ನು ನಾವು ಹಾಳುಮಾಡಿ ಕೊಂಡಿರುತೇವೆ ಅದಕ್ಕಾಗಿ ನಾವು ಯಾವ ಸಮಯಕ್ಕೆ ಎಷ್ಟನ್ನು ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದು ಅದನ್ನು ಅರ್ಥಮಾಡಿಕೊಂಡು ಸಾಗಿದರೆ ಜೀವನವು ನಮ್ಮ ಹಿಡಿತದಲ್ಲಿ ಇರುತ್ತದೆ.

ಆಗ ಬದುಕಿಗೂ ಒಂದು ಅರ್ಥವು ಬರುತ್ತದೆ. ನಾವು ಮತ್ತು ನೀವುಗಳು ಪ್ರತಿಯೊಬ್ಬರೂ ಕೂಡ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಂಡು ಬದುಕನ್ನು ಸಾಗಿಸಿ ನಾವು ಅವಶ್ಯಕತೆಗೆ ತಕ್ಕಂತಹ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಕೆಲವೊಮ್ಮೆ ಗೊತ್ತಿಲ್ಲದೆ ಸಾಮಾಜಿಕ ಜಾಲತಾಣಗಳಿಂದ ಜೀವನವೇ ಒಂದು ದುಸ್ಥಿತಿಗೆ ಬಂದು ತಲುಪುವ ಪರಿಸ್ಥಿತಿಗೆ ಬಂದು ಬಿಟ್ಟಿರುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಎಚ್ಚರದಿಂದ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಮುಳಿಗಿದರೆ ತನ್ನನ್ನು ತಾನು ಸರಿಯಾದ ರೀತಿಯಲ್ಲಿ ಅರ್ಥವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಭವಿಷ್ಯದ ಚಿಂತನೆಯು ಇರುವುದಿಲ್ಲ. ಸಂಬಂಧಗಳ ಅರಿವೇ ಇರುವುದಿಲ್ಲ ಎಂಬಂತೆ ಬದುಕು ಒಂದು ಸಾಮಾಜಿಕ ಜಾಲತಾಣದಿಂದ ಆಗುವಂತದು ಅದಕ್ಕಾಗಿ ತಂದೆ-ತಾಯಿ ಗುರು-ಹಿರಿಯರು ಸ್ನೇಹಿತರು ಇವರುಗಳು ನಮ್ಮ ಬದುಕಿಗೆ ಅತಿ ಮುಖ್ಯರಾಗುತ್ತಾರೆ. ಅದೇ ರೀತಿಯಲ್ಲಿ ಕಲಿತು ಕೊಂಡಷ್ಟು ಸಾಮಾಜಿಕ ಜಾಲತಾಣದಲ್ಲಿ ಕಲಿಯಲು ಸಾಧ್ಯವಿಲ್ಲ ಎಂಬುದು ಬದುಕಿಗೆ ಎಲ್ಲವೂ ಮುಖ್ಯವಾಗುತ್ತದೆ. ಊಟಕ್ಕೆ ಉಪ್ಪಿನ ಕಾಯಿ ಎಷ್ಟು ಮುಖ್ಯವೋ, ಬದುಕಿಗೆ ಮೊಬೈಲ್ (mobile) ಸಾಮಾಜಿಕ ತಾಣಗಳು ಅಷ್ಟೇ ಮುಖ್ಯ, ಇವುಗಳು ಅತಿಯಾದರೆ ಯಾವುದು ಶಾಶ್ವತವಾಗಿ ಉಳಿಯುವುದಿಲ್ಲ ಎಂಬ ಬದುಕು ಕೂಡ ನಶ್ವರವೆನಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version