ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಗುಬ್ಬಚ್ಚಿ

Published

on

ಹೆಣ್ಣು ಗುಬ್ಬಚ್ಚಿ

ಪುಟ್ಟ ಗಾತ್ರದ, ನೆಲದ ಮೇಲೆ ವಾಸಿಸುವ, ನಮಗೆಲ್ಲ ಪರಿಚಿತವಾಗಿರುವ ಹಕ್ಕಿ ಗುಬ್ಬಚ್ಚಿ. ಹೆಣ್ಣು ಹಕ್ಕಿಯ ಬಣ್ಣ ಬೂದು. ರೆಕ್ಕೆಯ ಮೇಲೆ ಕಪ್ಪು ಪಟ್ಟಿಗಳಿರುತ್ತವೆ. ಗಂಡು ಹಕ್ಕಿಗೆ ರೆಕ್ಕೆ, ಕೆನ್ನೆ ಮತ್ತು ತಲೆಯ ಭಾಗ ಕಂದುಗೆಂಪು ಬಣ್ಣವಿರುತ್ತದೆ. ಜನವಸತಿ ಪ್ರದೇಶವಿರುವಲ್ಲಿ, ಒಣಗಿದ ಹುಲ್ಲು, ಹತ್ತಿ, ನಾರುಗಳಿಂದ ಗೂಡು ಕಟ್ಟುತ್ತವೆ.

ಸಾಮಾನ್ಯವಾಗಿ ಇವು ಸರ್ವಭಕ್ಷಕ.ಕಾಳು, ಹಣ್ಣು, ಮತ್ತು ಹೂವಿನ ಮಕರಂದವನ್ನೂ ಸೇವಿಸುತ್ತವೆ. ಗುಬ್ಬಚ್ಚಿಗಳು ಹಳೆಯ ಮನೆಗಳ ಪಡಸಾಲೆಯ ಮುಂಭಾಗದಲ್ಲಿ, ಮಾಡು ಹೆಂಚುಗಳಿರುವಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು. ಬಹುತೇಕರು, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಗುಬ್ಬಚ್ಚಿ ಗಾತ್ರದ ಹಲವಾರು ಹಕ್ಕಿಗಳನ್ನು ಒಟ್ಟಾಗಿ “ಗುಬ್ಬಿ” ಎಂದೇ ಗುರುತಿಸುತ್ತಾರೆ.

ಗಂಡು ಗುಬ್ಬಚ್ಚಿ

ನಮ್ಮ ಜೀವನದ ಭಾಗವೇ ಆಗಿ ಹೋಗಿದ್ದವು. ತುಂಬಾ ಸರಳವಾಗಿ, ತುಸು ಹೆಚ್ಚೇ ಸಹಜವಾಗಿ ಬದುಕುವ ಗುಬ್ಬಚ್ಚಿಗಳು ಅವನತಿಯ ಅಂಚನ್ನು ತಲುಪಿದ್ದು ಬಹುಶಃ ಈ ಸರಳತೆಯೇ, ಸೂಕ್ಷ್ಮತೆಯೇ ಕಾರಣವಾಗಿರಬಹುದು. ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಅವು ಅಳಿವಿನಂಚಿಗೆ ಬಂದಿವೆ.ನಮ್ಮೊಳಗಿನ ಗುಬ್ಬಿಯನ್ನು ನಾವೇ ಕೊಂದಿದ್ದೇವೆ.

ಭಗವತಿ ಎಂ.ಆರ್
ಕವಯಿತ್ರಿ, ಛಾಯಾಗ್ರಾಹಕಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version