ದಿನದ ಸುದ್ದಿ

ಪಕ್ಷಿ ಪರಿಚಯ | ಹಾಲಕ್ಕಿ

Published

on

ಫೋಟೋ : ಭಗವತಿ ಎಂ.ಆರ್
  • ಭಗವತಿ ಎಂ.ಆರ್

ಮ್ಮಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾಲಕ್ಕಿ ಅಥವಾ ಚುಕ್ಕೆ ಗೂಬೆಗಳನ್ನು ಇಂಗ್ಲೀಷಿನಲ್ಲಿ Spotted Owlet ಎಂದು ಕರೆಯುತ್ತಾರೆ. ಹೆಚ್ಚಿನ ಜನರು ಇವುಗಳನ್ನು Owl ಎಂದೇ ಕರೆಯುತ್ತಾರೆ. ಆದರೆ ಇವು ಗಾತ್ರದಲ್ಲಿ ಚಿಕ್ಕವು. ಗೂಬೆಗಳ ಕಣ್ಣು ಬಹಳ ಚುರುಕು. ನಾವು ಎಷ್ಟೇ ದೂರದಲ್ಲಿದ್ದರೂ ಸುಲಭವಾಗಿ ಗುರುತಿಸುವ ಶಕ್ತಿಉಳ್ಳವು.

ಗೂಬೆಗಳಿಗೆ ಬೆಳಗಿನ ಹೊತ್ತು ಕಣ್ಣು ಕಾಣುವುದಿಲ್ಲ ಎಂಬ ತಪ್ಪು ನಂಬಿಕೆ ಬಹುತೇಕ ಜನರಲ್ಲಿ ಇದೆ. ಆದರೆ, ಅವುಗಳಿಗೆ ಕಣ್ಣು ಚೆನ್ನಾಗಿಯೇ ಕಾಣುತ್ತದೆ. ಅವುಗಳ ದಿನಚರಿ, ಜೀವನ ವಿಧಾನ ರಾತ್ರಿಯ ಹೊತ್ತಿಗೆ ಸೀಮಿತವಾಗಿರುವುದರಿಂದ ಕತ್ತಲಿನಲ್ಲಿ ಅವುಗಳ ಕಣ್ಣು ತುಂಬಾ ಚುರುಕು. ಯಾವುದೇ ಶಬ್ಧವಾಗದಂತೆ ಬೇಟೆಯ ಪ್ರಾಣಿಯನ್ನು ದೂರದಿಂದಲೆ ಗುರುತಿಸಿ ಒಂದೇ ಏಟಿಗೆ ಬೇಟೆಯಾಡಬಲ್ಲವು. ’ಶಬ್ಧವೇಧಿ’ ಎಂಬ ಕಲ್ಪನೆ ಮನುಷ್ಯನಿಗೆ ಬಂದದ್ದು ಇವುಗಳಿಂದಲೇ ಇರಬೇಕು.

ಗೂಬೆಗೂ ಶಕುನಕ್ಕೂ ಹತ್ತಿರದ ಸಂಬಂಧ. ಎಲ್ಲಾ ಬೈಗುಳಗಳಿಗೂ, ಅಪಶಕುನಕ್ಕೂ ತಳುಕು ಹಾಕಿಕೊಳ್ಳುವ ಹಕ್ಕಿ. ಲಕ್ಶ್ಮಿಯ ವಾಹನ ಗೂಬೆ- ಆದರಿಂದ ಅವುಗಳನ್ನು ನೋಡಿದರೆ ಶುಭವಾಗುವುದು ಎಂದು ನಂಬುವವರೂ ಇದ್ದಾರೆ. ಕಾಂಚಾಣದ ಲಾಭಕ್ಕೆ ಲಕ್ಷ್ಮೀ ನಮಗೆ ಬೇಕು. ಅದರ ವಾಹನ ಶುಭ ಸೂಚಕವಲ್ಲ. ಅಂಥ ವೈರುಧ್ಯ ನಮ್ಮಲ್ಲಿದೆ.

ಗೂಬೆ ತನ್ನ ಕತ್ತನ್ನು 360 ಕೋನದಲ್ಲಿ ತಿರುಗಿಸಬಲ್ಲದು. ಹಾಗಾಗಿ ಬೇಟೆ ಅಥವಾ ಶತ್ರುಗಳನ್ನು ಯಾವ ಕಡೆಯಿಂದಾದರೂ ಗುರುತಿಸಬಲ್ಲದು. ಕತ್ತನ್ನು ಹಾಗೆ ತಿರುಗಿಸಬಲ್ಲ ಶಕ್ತಿಯಿರುವ ಹಕ್ಕಿ ಇದೊಂದೇ ಇರಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version