ದಿನದ ಸುದ್ದಿ
ಸೋಮವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ..?
ಸುದ್ದಿದಿನ,ಚಾಮರಾಜನಗರ : ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸ ಬೇಕೆನ್ನುವುದು ಸರ್ಕಾರದ ಅಭಿಪ್ರಾಯವಾಗಿದ್ದು, ಪರೀಕ್ಷಾ ವೇಳಾ ಪಟ್ಟಿ ಮುಂದಿನ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಚಾಮರಾಜನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ಉದ್ದೇಶಿಸಿಸಿ ಮಾತನಾಡಿದ ಅವರು ಈ ಕೋರೋನಾ ಪರಿಣಾಮದಿಂದ ಶಿಕ್ಷಣ ಇಲಾಖೆಗೂ ಕೂಡ ತೊಂದರೆಯಾಗಿದೆ, ಪರೀಕ್ಷೆ ನಡೆಸುವುದರ ಬಗ್ಗೆ ಶಿಕ್ಷಣ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕಟ ಮಾಡಲಾಗುತ್ತದೆ ಎಂದರು.
ಪರೀಕ್ಷೆ ನಡೆಸುವುದರ ಬಗ್ಗೆ ನಾಳೆ ಪದವಿಧರ, ಶಿಕ್ಷಕರ ಕ್ಷೇತ್ರದ ಎಂಎಲ್ಸಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಮಾಲೋಚನೆ ಮಾಡುತ್ತೇನೆ. ಪರೀಕ್ಷಾ ಕೇಂದ್ರ ಹೆಚ್ಚಳ ಮಾಡಿ, ಕೊಠಡಿಯಲ್ಲಿ ಕಡಿಮೆ ಸಂಖ್ಯೆ ಯ ಮಕ್ಕಳನ್ನ ಕೂರಿಸಿ, ಮಾಸ್ಕ್ ಕಡ್ಡಾಯ ಮಾಡಿ ಪರೀಕ್ಷೆ ನಡೆಸುವುದು ಸರ್ಕಾರದ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಸುದ್ದಿದಿನ. ಕಾಂ|ವಾಟ್ಸಾಪ್|9980346243