ದಿನದ ಸುದ್ದಿ

ಮುಂದಿನ ವರ್ಷದಿಂದ 10ನೇ ತರಗತಿಗೆ ಕೃಪಾಂಕ ರದ್ದು ; ಸಚಿವ ಮಧುಬಂಗಾರಪ್ಪ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಚಿಕ್ಕಮಗಳೂರು : ಪರೀಕ್ಷೆಯಲ್ಲಿ ಪಾವಿತ್ರತೆ ಮತ್ತು ಶಿಸ್ತು ಕಾಪಾಡುವ ಉದ್ದೇಶದಿಂದ ಈ ವರ್ಷ ಹತ್ತನೆ ತರಗತಿ ವಿಧ್ಯಾರ್ಥಿಗಳಿಗೆ ಶೇಕಡ 20 ರಷ್ಟು ಕೃಪಾಂಕಗಳನ್ನು ನೀಡಲಾಗಿದೆ.

ಇದು ಈ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ವರ್ಷದಿಂದ ಕೃಪಾಂಕ ನೀಡುವುದನ್ನು ರದ್ದುಗೊಳಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಕೃಪಾಂಕ ನೀಡಿದ ಕಾರಣ ಉತ್ತಮ ಫಲಿತಾಂಶ ಬಂದಿದೆ. ಇದ್ದರಿಂದ ಮಕ್ಕಳ ಸಾಮರ್ಥ್ಯ ತಿಳಿಯಲು ಸಹಾಯವಾಗಿದೆ. ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗಿದ್ದು, ಮುಂದಿನ ವರ್ಷದಿಂದ ಇದನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.

ಈ ವೇಳೆ ಇಂಧನ ಸಚಿವ ಕೆ.ಜೆ ಜಾರ್ಜ್, ಶಾಸಕರಾದ ಹೆಚ್.ಡಿ ತಮ್ಮಯ್ಯ, ನಯನ ಮೋಟಮ್ಮ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version