ಸಿನಿ ಸುದ್ದಿ

ನಾಗಮಂಡಲ ನಾಯಕಿಗೆ ಕಿಚ್ಚನ ಸಹಾಯ

Published

on

ಸುದ್ದಿದಿನ ಡೆಸ್ಕ್ : ನಟಿ ವಿಜಯಲಕ್ಷ್ಮಿ ಯವರ ಅನಾರೋಗ್ಯದ ವಿಷಯ ತಿಳಿದು ಒಂದು ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದಾರೆ ಕಿಚ್ಚ ಸುದೀಪ್.

ಜ್ವರ ಹಾಗು ಬಿಪಿ ತೊಂದರೆಯಿಂದ ಬಳಲ್ತಿದ್ದ ನಟಿ ವಿಜಯ ಲಕ್ಷ್ಮಿ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ರು.‌ ಚಿಕಿತ್ಸೆ ಗಾಗಿ ಚಿತ್ರರಂಗದಿಂದ ಸಹಾಯ ಹಸ್ತವನ್ನ ಕೇಳಿದ್ದರು ವಿಜಯಲಕ್ಷ್ಮಿ ತಂಗಿ ಉಷಾ. ಈ ಹಿನ್ನೆಲೆಯಲ್ಲಿ ವಾಣಿಜ್ಯಮಂಡಳಿ‌,‌ನಟ ಮುರಳಿ ಸೇರಿದಂತೆ ಹಲವು ನಟರು ಹಣ‌ದ ಸಹಾಯ ಮಾಡಿದ್ದಾರೆ.

ಈ ವಿಷಯ ಕೇಳಿ ಸಹಾಯ ಹಸ್ತ ಚಾಚಿರುವ ಸುದೀಪ್ ಅವರು ವಿಜಯ ಲಕ್ಷ್ಮಿ ಅವರ ಆಸ್ಪತ್ರೆ ಖರ್ಚಿಗೆ ಒಂದು ಲಕ್ಷ ರೂಗಳನ್ನು ಕೊಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version