ಸಿನಿ ಸುದ್ದಿ
ಸಲ್ಲು ಭಾಯ್ ಜತೆ ‘ದಭಾಂಗ್3’ ನಲ್ಲಿ ಕಿಚ್ಚ ವಿಲನ್..!?
ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಅಭಿನಯದ ‘ ಪೈಲ್ವಾನ್’ ಸಿನೆಮಾದ ಟೀಸರ್ ಭಾರೀ ಹವಾ ಎಬ್ಬಿಸಿದೆ. ಕಿಚ್ಚ ತನ್ನ ದೇಹವನ್ನು ಹುರಿಗೊಳಿಸಿಕೊಂಡು ಕುಸ್ತಿ ಅಖಾಡದಲ್ಲಿನ ಪಟ್ಟುಗಳನ್ನ ನೋಡಿ ಅಭಿಮಾನಿಗಳು ಹುಚ್ಚೆದ್ದಿದ್ದಾರೆ.
ಈ ಸಿನೆಮಾದ ಟೀಸರ್ ನೋಡಿ ‘ ಬಾಲಿವುಡ್ ನ ಎವರ್ಗ್ರೀನ್ ನಟ ಸಲ್ಮಾನ್ ಖಾನ್ ಕಿಚ್ಚನಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಹಾಗೇ ಇತರ ಬಾಲಿವುಡ್ ಹಾಗೂ ಟಾಲಿವುಡ್ ಮಂದಿಯೂ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ಅಂದಹಾಗೆ ಕಿಚ್ಚ ಸುದೀಪ್ ‘ ಸಲ್ಮಾನ್ ಖಾನ್’ ಅಭಿನಯದ ‘ದಭಾಂಗ್3’ ಸಿನೆಮಾದಲ್ಲಿ ಅಭಿನಯಿಸುತ್ತಾರಾ? ಎಂಬ ಪ್ರಶ್ನೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಪ್ರಭುದೇವ ನಿರ್ದೇಶನದ ‘ ದಭಾಂಗ್, ದಭಾಂಗ್2’ ನಲ್ಲಿ ಅಭಿನಯಿಸಿದ್ದ ಸಲ್ಲು ಭಾಯ್ ‘ದಭಾಂಗ್3’ ನಲ್ಲೂ ಅಭಿನಯಿಸುತ್ತಿದ್ದಾರೆ.
ದಭಾಂಗ್ 3ನಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ನಟಿಸುತ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು, ಇನ್ನೂ ಸಿನೆಮಾತಂಡ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಂದುಕೊಂಡಂತೆ ಆದರೆ ಸಲ್ಲು ಭಾಯ್ ಜತೆ ಕಿಚ್ಚನ ಖದರನ್ನು ನೋಡುವ ಭಾಗ್ಯ ಕಿಚ್ಚನ ಅಭಿಮಾನಿಗಳದ್ದಾಗಲಿ.
— Kichcha Sudeepa (@KicchaSudeep) January 22, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401