ದಿನದ ಸುದ್ದಿ
ದೇಶದಲ್ಲಿ 275 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆ; ರಫ್ತಿಗೆ ವಾಣಿಜ್ಯ ಸಚಿವಾಲಯ ಅನುಮತಿ
ಸುದ್ದಿದಿನ ಡೆಸ್ಕ್ : ಪ್ರಸಕ್ತ ಹಂಗಾಮಿನಲ್ಲಿ 60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲು ಅವಕಾಶ ನೀಡಲಾಗಿದೆ. ದೇಶದಲ್ಲಿ ಸಕ್ಕರೆ ಬೆಲೆ ಸ್ಥಿರತೆ ಮತ್ತು ಕಾರ್ಖಾನೆಗಳ ಹಣಕಾಸು ಸ್ಥಿತಿ ಸಮತೋಲನಗೊಳಿಸುವ ಗುರಿಯೊಂದಿಗೆ ವಾಣಿಜ್ಯ ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.
ದೇಶದಲ್ಲಿ 275 ಲಕ್ಷ ಮೆಟ್ರಿಕ್ ಟನ್ ಬಳಕೆಯಾಗುತ್ತಿದ್ದು, ಇದರ ಜೊತೆಗೆ 50 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯಿಂದ ಎಥನಾಲ್ ಉತ್ಪಾದನೆ ಮಾಡಲಾಗಿದೆ. ಸಕ್ಕರೆ ರಫ್ತು ನೀತಿಯಂತೆ ರೈತರಿಗೆ ತ್ವರಿತವಾಗಿ ಕಬ್ಬಿನ ದರವನ್ನು ಪಾವತಿ ಮಾಡಲು ಅನುಕೂಲವಾಗಲು ಕಾರ್ಖಾನೆಗಳಿಗೆ ರಫ್ತು ಮಾಡಲು ಅವಕಾಶ ನೀಡಲಾಗಿದೆ.
ರೈತರಿಗೆ ಕಬ್ಬು ಸರಬರಾಜು ಮಾಡಿದ 60 ದಿನಗಳ ಒಳಗಾಗಿ ಕಬ್ಬಿನ ದರ ಪಾವತಿ ಹಾಗೂ ರಫ್ತು ಮಾಡಲು ಅವಕಾಶ ನೀಡಲಾಗಿದೆ. ಕಬ್ಬನ್ನು ರೈತರ ಹೊಲದಿಂದಲೇ ಸಂಗ್ರಹ ಮಾಡಿ ಕಾರ್ಖಾನೆವರೆಗೆ ರವಾನಿಸಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಕ್ಕರೆ ದರ ಸ್ಥಿರತೆ ಹಿನ್ನೆಲೆಯಲ್ಲಿ ರಫ್ತಿಗೆ ತೊಂದರೆಯಾಗದಂತೆ ರಫ್ತು ಮಾಡಲು ವಾಣಿಜ್ಯ ಸಚಿವಾಲಯ ಅನುಮತಿ ನೀಡಿದೆ ಎಂದು ಹೇಳಿಕೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243