ದಿನದ ಸುದ್ದಿ
ಸೂಳೆಕೆರೆ ಸರ್ವೇಕಾರ್ಯಕ್ಕೆ 11ಲಕ್ಷ ರೂ ಅನುಮೋದನೆ
ಸುದ್ದಿದಿನ,ದಾವಣಗೆರೆ : ಶಾಂತಿಸಾಗರ ಕೆರೆಯ ಸರ್ವೇ ಕಾರ್ಯಕ್ಕೆ ಅಗತ್ಯವಾದ 11 ಲಕ್ಷ ರೂಗಳನ್ನು ಕರ್ನಾಟಕ ನೀರಾವರಿ ನಿಗಮ ಇಲಾಖೆಯು ಅನುಮೋದನೆಯನ್ನು ನೀಡಿದೆ. ಶಾಂತಿಸಾಗರದ ಸರ್ವೇ ಕಾರ್ಯ ಮತ್ತು ಒತ್ತುವರಿ ತೆರವು ಕಾರ್ಯಾಚರಣೆಯು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ದಯವಿಟ್ಟು ಚನ್ನಗಿರಿಯ ಸಮಸ್ತ ಜನರು ಕೆರೆಯ ದುಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರ್ವೇ ಕಾರ್ಯಕ್ಕೆ ಸಹಕರಿಸಬೇಕಾಗಿ ಖಡ್ಗ ಸಂಘವು ವಿನಂತಿಸಿಕೊಂಡಿದೆ.
ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಖಡ್ಗ ಸಂಘ ಮತ್ತು ಶಾಂತಿಸಾಗರ (ಸೂಳೆಕೆರೆ) ಸಂರಕ್ಷಣಾ ಮಂಡಳಿಯು ಸಮಸ್ತ ಚನ್ನಗಿರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಶಾಂತಿಸಾಗರದ ಅಭಿಮಾನಿಗಳ ಪರವಾಗಿ ಕೆಳಗೆ ನಮೂದಿಸಿರುವ ಗಣ್ಯ ವ್ಯಕ್ತಿಗಳಿಗೆ, ನಿಷ್ಠಾವಂತ ಅಧಿಕಾರಿಗಳಿಗೆ, ರೈತ ಮುಖಂಡರಿಗೆ, ವಿದ್ಯಾರ್ಥಿಗಳಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401