ರಾಜಕೀಯ
ಸುಮಲತಾ ಅಂಬರೀಶ್ ಅಭಿಮಾನಿಯ ಹೇರ್ ಕಟ್ ನಲ್ಲಿ ‘ಕ್ರಮ ಸಂಖ್ಯೆ 20’ ..!
ಸುದ್ದಿದಿನ,ಮಂಡ್ಯ : ಲೋಕಸಭಾ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸುಮಲತಾ, ಯಶ್, ದರ್ಶನ್ ವಿರುದ್ಧ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇತ್ತ ಅವರೂ ಕೂಡ ಜಿದ್ದಿಗೆ ಬಿದ್ದವರಂತೆ ಮಾತಿನ ತಿರಿಗೇಟು ಕೊಡುತ್ತಿದ್ದಾರೆ.
ಅಂದ ಹಾಗೆ ಸುಮಲತಾ ಅಂಬರೀಶ್ ಗೆಲುವಿಗೆ ಅವರ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ವಿಶೇಷವಾಗಿ ತಮ್ಮ ಅಭಿಮಾನವನ್ನು ತೋರಿದ್ದಾನೆ. ತನ್ನ ತಲೆಯ ಮೇಲೆ ಸುಮಲತಾ ಅಂಬರೀಶ್ ಓಟಿಂಗ್ ಸಂಖ್ಯೆ 20 ಎಂದು ಹೇರ್ ಕಟ್ ಮಾಡಿಸಿಕೊಂಡು ಈಗ ಸುದ್ದಿಯಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243