ದಿನದ ಸುದ್ದಿ
ಸುಮಲತಾ ಪರ ಕಿಚ್ಚನ ಕ್ಯಾಂಪೇನ್..!
ಸುದ್ದಿದಿನ,ಬೆಂಗಳೂರು : ಅಕ್ಷರಶಃ ರಣಕಣವಾಗಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದು, ಇವರಿಗೆ ಜೋಡೆತ್ತುಗಳಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡಿ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ “ದರ್ಶನ್ ಇರುವಾಗ ಪ್ರಚಾರಕ್ಕೆ ನಾನೇಕೆ ?” ಎಂದು ಹೇಳಿದ್ದರು. ಆದರೆ ಮಂಡ್ಯದ ರಾಜಕೀಯ ವಾತಾವರಣ ಗಮನಿಸಿದ ಕಿಚ್ಚ ಸುದೀಪ್ ಈಗ ಸುಮಲತಾ ಅಂಬರೀಶ್ ಪರ ಏಪ್ರಿಲ್ 10-11 ರಂದು ಪ್ರಚಾರಕ್ಕೆ ಬರಲಿದ್ದಾರೆ. ಮಳವಳ್ಳಿ ಸೇರಿದಂತೆ ಹಲವೆಡೆ ಕಿಚ್ಚ ಸುದೀಪ್ ಸುಮಲತಾ ಅಂಬರೀಶ್ ಪರ ಮತಯಾಚಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401