ದಿನದ ಸುದ್ದಿ

ದೀಪಾವಳಿ ಪೂಜೆ ; ಸೂರ್ಯಗ್ರಹಣ ಆಗಮನ..!

Published

on

  • ಅನುಶ್ರೀ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

ದೀಪಾವಳಿ ಹಬ್ಬ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೊ ಈ ಹಬ್ಬ ಎಂದರೆ ಅಚ್ಚುಮೆಚ್ಚು ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಹಿಂದೂ ಧರ್ಮದ ಪ್ರತಿ ಒಬ್ಬರು ಕೂಡ ಆಚರಿಸುತ್ತಾ, ಹಾಗೆಯೇ ಈ ವರ್ಷವು ಕೂಡ ಪ್ರತಿ ಒಬ್ಬರು ಕೂಡ ಹಬ್ಬದ ಸಡಗರದಲ್ಲಿ ಇದ್ದಾರೆ ಆದರೆ, ಇದರ ಮಧ್ಯೆ ನೆಂಟರು ಬರುವ ಹಾಗೆ ಸೂರ್ಯಗ್ರಹಣವು ಸಹ ಬಂದಿದ್ದು.

ದೀಪಾವಳಿಯು ಕತ್ತಲೆಯಿಂದ ಬೆಳಕಿನೆಡೆಗೆ ಕರೆದು ಕೊಂಡು ಹೋಗುವ ಹಬ್ಬ. ಇಂತಹ ಬೆಳಕಿನ ಹಬ್ಬಕ್ಕೆ ಈ ಬಾರಿ ಸೂರ್ಯಗ್ರಹಣ ಹಿಡಿದು, 27 ವರ್ಷದ ಹಿಂದೆ ಇದೇ ರೀತಿಯಲ್ಲಿ ದೀಪಾವಳಿ ಹಬ್ಬ ದಿನದಂದು ಗ್ರಹಣ ಬಂದಿದೆ. ಅದೇ ರೀತಿ ಈ ಬಾರಿಯೂ ಕಾಕತಾಳೀಯವಾಗಿ ಎಂಬಂತೆ ಸೂರ್ಯಗ್ರಹಣವು ಸಂಭವಿಸಿದೆ. ದೀಪಾವಳಿಯ ಈ ಗ್ರಹಣವು 2022ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ವಾಗಿದೆ.

ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 25ರಂದು ಸಂಭವಿಸಿದೆ. ದೀಪಾವಳಿ ಅಮಾವಾಸ್ಯೆ ದಿನ ಸೂರ್ಯಗ್ರಹಣ ವಾಗಿದೆ. ಈ ಸೂರ್ಯಗ್ರಹಣದ ಅವಧಿಯು ಸುಮಾರು 4 ಗಂಟೆ 3 ನಿಮಿಷಗಳವರೆಗೆ ಗ್ರಹಣ ನಡೆದಿದ್ದು, ಈ ವರ್ಷ ನಡೆಯುವಂತಹ ಸೂರ್ಯಗ್ರಹಣ ಈಗ ಸಂಭವಿಸಿರುವ ಸೂರ್ಯಗ್ರಹಣ ಬಹಳ ಮುಖ್ಯವೆಂದು ಹೇಳಿದ್ದಾರೆ. ಯಾಕೆಂದರೆ ಗ್ರಹಣದ ಸೂಚಕವೂ ದೀಪಾವಳಿಯ ರಾತ್ರಿಯಿಂದಲೇ ಪ್ರಾರಂಭವಾಗಿತ್ತು.

ಸೂರ್ಯಗ್ರಹಣ ಅಕ್ಟೋಬರ್ 25ರಂದು ಮಧ್ಯಾಹ್ನ 2 ಗಂಟೆ 29 ನಿಮಿಷಕ್ಕೆ ಪ್ರಾರಂಭವಾಗಿ ಸೂರ್ಯಗ್ರಹಣದ ಮಧ್ಯಾವಧಿಯಲ್ಲಿ ಸಂಜೆ 4 ಗಂಟೆ 30 ನಿಮಿಷ ಸಂಜೆ 6 ಗಂಟೆ 32 ನಿಮಿಷಕ್ಕೆ ಗ್ರಹಣ ಮುಗಿಯಲಿದೆ. ಸೂರ್ಯಗ್ರಹಣ ಮುಗಿಯುವ ಮೊದಲೇ ಭಾರತದಲ್ಲಿ ಸೂರ್ಯಾಸ್ತ ವಾಗುತ್ತದೆ. ಹಾಗಾಗಿ ಭಾರತದಲ್ಲಿ ಸೂರ್ಯಗ್ರಹಣದ ಮೋಕ್ಷ ಎಂದು ಪರಿಗಣಿಸಲಾಗಿತ್ತು.

ಅನುಶ್ರೀ

ಜೋತಿಷ್ಯ ಶಾಸ್ತ್ರದ ಪ್ರಕಾರ ಸೂತಕ ಅವಧಿಯು ಗ್ರಹಣ ಪ್ರಾರಂಭವಾಗಿದ್ದು, ಹಾಗಾಗಿ ಈ ಸಮಯದಲ್ಲಿ ಎಲ್ಲಿಯೂ ಯಾವುದೇ ರೀತಿಯ ಪೂಜೆ ಮಾಡುವುದು, ಮಂಗಳಕರ ಅಲ್ಲ ಎಂದು ಹೇಳಿರುವ ರೀತಿಯಲ್ಲಿಯೇ ನಿನ್ನೆ ನಡೆದಂತಹ ಸೂರ್ಯಗ್ರಹಣದ ಸಮಯದಲ್ಲಿ ಯಾವುದೇ ದೇವಾಲಯಗಳಲ್ಲಿ ಪೂಜೆ ಮಾಡಿಲ್ಲ ಸೂರ್ಯಗ್ರಹಣ ಮೋಕ್ಷ ವಾದ ನಂತರ ಎಲ್ಲಾ ಕಡೆಯಲ್ಲೂ ಪೂಜೆ ಹೋಮಗಳನ್ನು ಮಾಡಿ ಭಕ್ತರಿಗೆ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ದೀಪಾವಳಿ ಎಂದೇ ಸೂರ್ಯಗ್ರಹಣ ವೈಜ್ಞಾನಿಕ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಸಾಮಾನ್ಯವಾಗಿ ಪ್ರತಿವರ್ಷ ದೀಪಾವಳಿ ಲಕ್ಷ್ಮೀ ಪೂಜೆಯು ಅಮಾವಾಸ್ಯೆಯ ಸಮಯದಲ್ಲಿ ಬರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯಗ್ರಹಣವು ಅಮಾವಾಸ್ಯೆ ದಿನದಂದು ಮಾತ್ರ ಸಂಭವಿಸುತ್ತದೆ. ಆದ್ದರಿಂದ ದೀಪಾವಳಿ ಪೂಜೆ ದಿನದಂದು ಸೂರ್ಯಗ್ರಹಣವು ಬರುವುದರಲ್ಲಿ ಆಶ್ಚರ್ಯವೇನಿಲ್ಲ. ಅದೂ ಅಲ್ಲದೆ. ಆ ದಿನ ಸೂರ್ಯಗ್ರಹಣವು ಭೂಮಿಯ ಮೇಲ್ಮೈ ಒಂದು ಸಣ್ಣ ಭಾಗದಲ್ಲಿ ಮಾತ್ರ ಕಾಣುತ್ತದೆ ಎಂದು ತಜ್ಞರು ಹೇಳಿದ್ದಂತೆ ನಿನ್ನೆ ಗ್ರಹಣವು ಸಂಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version