ದಿನದ ಸುದ್ದಿ

ಬ್ಯಾಡಗಿ ಮಹಿಳಾ ಕಾಂಗ್ರೆಸ್ ಕಮಿಟಿಗೆ ಆಯ್ಕೆ

Published

on

ಸುದ್ದಿದಿನ,ಬ್ಯಾಡಗಿ : ತಾಲೂಕಿನ ಕರ್ನಾಟಕ ಪ್ರದೇಶ ಕಮಿಟಿಗೆ ಶ್ರೀಮತಿ ಲಕ್ಷ್ಮೀ ವಿ. ಜಿಂಗಾಡೆ ಆಯ್ಕೆಯಾಗಿದ್ದಾರೆ.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ॥ ಶ್ರೀಮತಿ ಪ್ರಷ್ಪಾ ಅಮರನಾಥ ಅವರ ಆದೇಶದ ಮೆರೆಗೆ ಶ್ರೀಮತಿ ಲಕ್ಷ್ಮೀ ವಿ. ಜಿಂಗಾಡೆ ಸಾ।। ಗುಂಡೇನಹಳ್ಳಿ ,ತಾ॥ ಬ್ಯಾಡಗಿ ,ಜಿ।। ಹಾವೇರಿ
ಅವರನ್ನು ಹಾವೇರಿ ಜಿಲ್ಲಾ, ಬ್ಯಾಡಗಿ ತಾಲೂಕಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿ ತಕ್ಷಣದಿಂದ ಕಾರ್ಯಪ್ರವೃತ್ತರಾಗಲು ಆದೇಶಿಸಲಾಗಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಿಮ್ಮ ಹಕ್ಕು ನಮ್ಮ ಹೋರಾಟ ಎಂಬ ನಿಟ್ಟಿನಲ್ಲಿ ಮಹಿಳೆಯರನ್ನು ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಆಡಳಿತ ಮುಖ್ಯವಾಹಿನಿಗೆ ತರಲು ಹಾಗೂ ಪಕ್ಷದ ಸಂಘಟನೆ ಮತ್ತು ಬಲವರ್ದನೆಗೆ ದುಡಿಯುತ್ತಿರೆಂದು ನಂಬಿ ನಾನು ಈ ಜವಾಬ್ದಾರಿಯನ್ನು ವಹಿಸುತ್ತಿದ್ದೇವೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಾವೇರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ನೇಮಕಾತಿ ಆದೇಶ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರೇಮಾ ಎಸ್. ಪಾಟೀಲ್
ಅಧ್ಯಕ್ಷರು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಹಾವೇರಿ.
ಮಹಿಳಾ ಕಾಂಗ್ರೆಸ್ ಸಮಿತಿಯ ಸದಸ್ಯರು.ಮಹೇಶ್ ಉಜಿನಿ. ವಿಷ್ಣು ಜಿಂಗಾಡೆ. ಹನುಮಂತಪ್ಪ ಬುಡಪನಹಳ್ಳಿ ಹಾಗೂ
ಕಾಂಗ್ರೆಸ್ ಮುಖಂಡರು. ಕಾರ್ಯಕರ್ತರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version