ದಿನದ ಸುದ್ದಿ

ದಾವಣಗೆರೆ | ವೃಂದ ಮತ್ತು ನೇಮಕಾತಿಯಲ್ಲಿನ ಸಮಸ್ಯೆ ಬಗೆಹರಿಸಲು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಉಪನಿರ್ದೇಶಕರಿಗೆ ಮನವಿ

Published

on

ಸುದ್ದಿದಿನ, ದಾವಣಗೆರೆ : ದಾವಣಗೆರೆ ಜಿಲ್ಲಾ / ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಇತ್ತೀಚೆಗೆ ಮಾನ್ಯ ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ. ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ಹಾಗೂ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ನೇಮಕಾತಿಯ ಬಗ್ಗೆ, ಮಾನ್ಯ ಉಪ ನಿರ್ದೇಶಕರ ಮೂಲಕ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ/ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾದಿಕಾರಿಗಳು ಹಾಜರಿದ್ದರು.

ಮನವಿ ಸಲ್ಲಿಸಿದ ಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸ್ ಮಾತನಾಡಿ ಎಲ್ಲ ನೌಕರರ ವೃಂದ ಮತ್ತು ನೇಮಕಾತಿ ಸಂಬಂಧಿಸಿದಂತೆ ಸರ್ಕಾರ ಕಾಳಜಿ ವಹಿಸಿದಂತೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕೂಡಲೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಹದಡಿ. ಮರುಳ ಸಿದ್ದಪ್ಪ,ತಾಲ್ಲೂಕು ಅಧ್ಯಕ್ಷರಾದ ರಾಜು, ಓಂಕಾರಪ್ಪ,ರಾಘವೇಂದ್ರ, ಸನಾವುಲ್ಲ ನವಿಲೇಹಾಳ್ ಸುಜಾತ, ವಿಜಯ ಕುಮಾರಿ, ಸುನೀತ, ಸೋಮಶೇಖರ್ ಬಿರಾದರ್, ಪ್ರದೀಪ್ , ಚಿನ್ನಪ್ಪ, ಹಾಗೂ ಸಂಘದ ಎಲ್ಲ ಪದಾದಿಕಾರಿಗಳು,ದೈಹಿಕ ಶಿಕ್ಷಕರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version