ದಿನದ ಸುದ್ದಿ

ಹೆಣ್ಣೆಂದು ನೋಡದೇ ಎದೆಗೆ ಒದ್ದ ದುರುಳ; ಅಧ್ಯಕ್ಷನಿಗೆ ಮಹಿಳೆಯಿಂದ ಚಪ್ಪಲಿ ಏಟು

Published

on

ಸುದ್ದಿದಿನ ಡೆಸ್ಕ್ : ಭೂಮಿ ವಿಚಾರ ಸಂಬಂಧಿಸಿದಂತೆ ಆರಂಭವಾದ ಜಗಳದಲ್ಲಿ ಹೆಣ್ಣೆಂದು ನೋಡದೇ ಮಂಡಳ ಪರಿಷತ್ ಅಧ್ಯಕ್ಷನೊಬ್ಬ ಮಹಿಳೆಯ ಎದೆಗೆ ಜಾಡಿಸಿ ಒದಿದ್ದಾನೆ. ಈ ಘಟನೆ ನಡೆದ ಬಳಿಕ ಮಹಿಳೆ ಅಧ್ಯಕ್ಷನಿಗೆ ಚಪ್ಪಲಿ ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ತೆಲಂಗಾಣ ರಾಜ್ಯದ ನಿಜಾಮಬಾದ್ ಜಿಲ್ಲೆಯ ಇಂದಲ್ವಾಯಿ ಬ್ಲಾಕ್‌ನ ತೆಲಂಗಾಣ ರಾಷ್ಟ್ರ ಸಮಿತಿಯ ಅಧ್ಯಕ್ಷ ಇಮ್ದಾದಿ ಗೋಪಿ ರಾಜವ್ವ ಎಂಬ ಮಹಿಳೆಯ ಎದೆಗೆ ಜಾಡಿಸಿ ಇದ್ದಿದ್ದರಿಂದ ಕೆಳಗೆ ಬಿದ್ದಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಂಡಳ ಅಧ್ಯಕ್ಷ ಇಮ್ಮಾದಿ ಗೋಪಿಯಿಂದ ಮಹಿಳೆ ಖರೀದಿಸಿದ್ದ ಜಮೀನು ಹಸ್ತಾಂತರ ಮಾಡದಿದ್ದರಿಂದ ಅಧ್ಯಕ್ಷನ ಮನೆ ಎದುರು ಕುಟುಂಬದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಳು. ಈ ವೇಳೆ ವಾಗ್ವಾದ ನಡೆದಾಗ ಮಹಿಳೆ ಎದೆಗೆ ಒದ್ದಿದ್ದಾನೆ. ಮಹಿಳೆಯು ಹತ್ತು ತಿಂಗಳ ಹಿಂದೆ 33 ಲಕ್ಷ ರೂ. ನೀಡಿ ಜಮೀನನ್ನು ಖರೀದಿಸಿದ್ದಳು. ಹೆಚ್ಚುವರಿ 23ಲಕ್ಷ ರೂ. ಬೇಡಿಕೆಯಿಟ್ಟಿದ್ದ ಗೋಪಿ ಹಸ್ತಾಂತರ ಮಾಡುವಲ್ಲಿ ವಿಳಂಬ ಮಾಡಿದ್ದ. ಜಮೀನಿನ ಮೂಲ ದಾಖಲಾತಿ ಪತ್ರಗಳನ್ನು ನೀಡುವಂತೆ ಮಹಿಳೆ ಮತ್ತು ಕುಟುಂಬ ಸದಸ್ಯರು ಆಗ್ರಹಿಸಿದ್ದರು.

ಈ ಇಬ್ಬರ ನಡುವೆ ಕಳೆದ ವಾರದಿಂದ ಕಲಹ ಉಂಟಾಗಿತ್ತು. ಆದರೂ ರಾಜವ್ವ ಮತ್ತು ಕುಟುಂಬದ ಸದಸ್ಯರು ಮಾಡಿದ ಮನವಿಗೆ ಸೊಪ್ಪು ಹಾಕದಿದುದ್ದರಿಂದ ಮಹಿಳೆ ಚಪ್ಪಲಿಯಿಂದ ಗೋಪಿಗೆ ಹೊಡೆದಿದ್ದಾಳೆ. ಆಗ ಗೋಪಿ ಮಹಿಳೆಯ ಎದೆಗೆ ಒದ್ದಿದ್ದಾನೆ. ಸ್ಥಳದಲ್ಲಿದ್ದ ಮಹಿಳೆಯ ಕಡೆಯವರು ಆತನ ನೂಕಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗೋಪಿಯ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಗೋಪಿಯು ಸಹ ಮಹಿಳೆ, ಆಕೆಯ ಸಂಬಂಧಿಕರ ವಿರುದ್ಧ ಅತಿಕ್ರಮಣ, ಆಸ್ತಿ ಹಾನಿ ಪ್ರತಿ ದೂರು ನೀಡಿದ್ದಾನೆ. ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version