ದಿನದ ಸುದ್ದಿ
ಮಹಿಳೆಯ ಎದೆಗೆ ಒದ್ದಿದ್ದ ಮಂಡಲ ಪರಿಷತ್ ಅಧ್ಯಕ್ಷ ಈಗ ಪೊಲೀಸರ ಅತಿಥಿ
ಸುದ್ದಿದಿನ ಡೆಸ್ಕ್ : ಭೂಮಿ ವಿಚಾರ ಸಂಬಂಧಿಸಿದಂತೆ ಜಗಳದಲ್ಲಿ ಮಹಿಳೆಯ ಎಂದೂ ನೋಡದೇ ಎದೆಗೆ ಒದ್ದಿದ್ದ ಮಂಡಳ ಪರಿಷತ್ತಿನ ಅಧ್ಯಕ್ಷ ಪೊಲೀಸರ ಅತಿಥಿಯಾಗಿದ್ದಾನೆ.
ತೆಲಂಗಾಣ ರಾಜ್ಯದ ನಿಜಾಮಬಾದ್ ಜಿಲ್ಲೆಯ ಇಂದಲ್ವಾಯಿ ಬ್ಲಾಕ್‌ನ ತೆಲಂಗಾಣ ರಾಷ್ಟ್ರ ಸಮಿತಿಯ ಅಧ್ಯಕ್ಷ ಇಮ್ದಾದಿ ಗೋಪಿ ರಾಜವ್ವ ಎಂಬ ಮಹಿಳೆಯ ಎದೆಗೆ ಜಾಡಿಸಿ ಒದ್ದಿದ್ದ ಘಟನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ತೆಲಂಗಾಣ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿಗೆ ಸೇರಿದ ಮಂಡಳ್ ಪರಿಷತ್ ಅಧ್ಯಕ್ಷ ಇಮ್ಮಡಿ ಗೋಪಿ ಮೇಲೆ ಮಹಿಳೆ ಮೇಲಿನ ಹಲ್ಲೆ ನಡೆಸಿದ್ದಕ್ಕೆ ಪೊಲೀಸರು ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದರು.
ಮಹಿಳೆಗೆ ಒದ್ದಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಚರ್ಚೆ ಗ್ರಾಸವಾಗಿತ್ತು.