ಸಿನಿ ಸುದ್ದಿ
ತೆಲುಗು ಚಿತ್ರಗಳಲ್ಲಿ ಹಳ್ಳಿ ಸೊಗಡು…!
ಸುದ್ದಿದಿನ ಡೆಸ್ಕ್ : ಇತ್ತೀಚಿನ ವರ್ಷಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಹಳ್ಳಿಗಾಡು, ಬದುಕಿನ ಚಿತ್ರಣ ಬಿಂಬಿಸುವ ಚಿತ್ರಗಳು ತೆರೆ ಕಾಣುತ್ತಿವೆ.
ಇತ್ತೇಚೆಗೆ ತೆರೆ ಕಂಡ ರಂಗಸ್ಥಳಂ ಇದಕ್ಕೆ ತಾಜಾ ನಿದರ್ಶನ. ಒಂದು ಟಿಪಿಕಲ್ ಹಳ್ಳಿಯಲ್ಲಿ ಏನೇನು ನಡೆಯುತ್ತದೆ, ಅಲ್ಲಿನ ವಾತಾವರಣ, ಸಂಬಂಧಗಳ ಬೆಸುಗೆ, ಜವರಿತನ ಹೇಗೆ ಇರುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. ಇದಕ್ಕಾಗಿ ವೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಜಮುಂಡ್ರಿ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ರಂಗಸ್ಥಳಂ ಚಿತ್ರದ ಚಿತ್ರೀಕರಣ ಮಾಡಲಾಗಿದೆ. 80ರ ದಶಕದ ಚಿತ್ರಗಳಂತೆ ಕಟ್ಟಿಕೊಡಲಾಗಿದೆ. ಚಕ್ಕಡಿ, ಮಡಕೆ, ರಸ್ತೆ ಬದಿಯ ಗೂಡಂಗಡಿಗಳು, ಸೋಂಪಾದ ಹಸಿರು, ಗೋದಾವರಿ ನದಿ ತೀರದಲ್ಲಿ ಇರುವ ಗ್ರಾಮಗಳಲ್ಲಿ ಚಿತ್ರಣ ಕಟ್ಟಿ ಕೊಡಲಾಗಿದೆ.
ಸತೀಶ್ ವೆಗೆಸ್ನಾ ಅವರ ಶತಮಾನಂ ಭವತಿ (2017) ಚಿತ್ರಕ್ಕೆ ರಾಷ್ಟ್ರೀಯ ಪದ್ಮ ಪ್ರಶಸ್ತಿ ಪುರಸ್ಕೃತ ಸಂದಿದೆ. ಹೊಸತನದ ನಿರೂಪಣೆ ಮತ್ತು ವಸ್ತುವಿನಿಂದ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿದೆ. ಸಂಪೂರ್ಣ ಮನರಂಜನೆ ನೀಡುವ ಜನಪ್ರಿಯ ಚಿತ್ರವಾಗಿದ್ದು, ಕೌಟುಂಬಿಕ ಸಂಬಂಧಗಳ ಮಹತ್ವ, ವಿದೇಶದಲ್ಲಿ ಇರುವ ಮಕ್ಕಳ ಬಗೆಗಿನ ತಾಯಿಯ ಕಾಳಜಿಯನ್ನು ವ್ಯಕ್ತಪಡಿಸುತ್ತದೆ.