ದಿನದ ಸುದ್ದಿ
ಬಿನ್ ಲಾಡೆನ್ ಬಿಲದಲ್ಲೇ ಅಡಗಿದ್ದ ಉಗ್ರ ಮಸೂದ್ ಅಜರ್..!
ಸುದ್ದಿದಿನ ಡೆಸ್ಕ್ : ಜಾಗತಿಕ ಉಗ್ರ ಬಿನ್ ಲಾಡೆನ್ ಅಡಗಿದ್ದ ಸ್ಥಳದಲ್ಲೇ ಇದ್ದ ಖತರ್ನಾಕ್ ಉಗ್ರ ಮಸೂದ್ ಅಜರ್. ಬಾಲಕೋಟ್ನ ಅಬ್ಬೋಟಾಬಾದಿಂದ 60 ಕಿಮೀ ದೂರದಲ್ಲಿದ್ದು ಜೆಇಎಂ ಕ್ಯಾಂಪ್- ಈ ಕ್ಯಾಂಪ್ನಲ್ಲೇ ಈತ ಅಡಗಿದ್ದ.
ಬಾಲಾಕೋಟ್- ಪಾಕಿಸ್ತಾನದ ಅಬ್ಬೋಟಾಬಾ ನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಅಬೊಟಾಬಾದ್ ನಲ್ಲೇ ಜಾಗತಿಕ ಉಗ್ರ ಒಸಾಮಾ ಬಿಲ್ ಲಾಡೆನ್ ತನ್ನ ಅಡಗುತಾಣವನ್ನು ಹೊಂದಿದ್ದ. ಖೈಬರ್ ಪಖ್ತುಖ್ವಾ ಪ್ರಾಂತ್ಯದ ಮನ್ಸೆಹ್ರಾ ಜಿಲ್ಲೆಗೆ ಈ ತಾಣ ಸೇರುತ್ತದೆ. 2005ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬಾಲಕೋಟ್ ಪಟ್ಟಣ ಸಂಪೂರ್ಣ ನಾಶವಾಗಿಬಿಟ್ಟಿತ್ತು. ಪಾಕಿಸ್ತಾನ ಹಾಗೂ ಸೌದಿ ಸಾರ್ವಜನಿಕ ಭೂಕಂಪ ಸಂತ್ರಸ್ತರ ನೆರವು ಪಡೆಯಿಂದ ಈ ಪಟ್ಟಣವನ್ನು ಪುನರ್ ನಿರ್ಮಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401