ದಿನದ ಸುದ್ದಿ
ಶಿರಸಿ : ಹುಲಿ ಹಾವಳಿಗೆ ಬೆದರಿದ ಜನತೆ
ಸುದ್ದಿದಿನ,ಶಿರಸಿ: ತಾಲ್ಲೂಕಿನ ಮತ್ತಿಘಟ್ಟಾ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹುಲಿ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮ ಸ್ಥರಲ್ಲಿ ಆತಂಕ ಹುಟ್ಟಿಸಿದೆ. ಹುಲಿ ಬೆನ್ನಟ್ಟಿಕೊಂಡು ಬಂದಿದ್ದರಿಂದ ಇಬ್ಬರು ಬೈಕ್ ಸವಾರರು ಗಾಯಗೊಂಡ ಘಟನೆಯೂ ನಡೆದಿದೆ.
ಶಿರಗುಣಿ-ಹೊಸಗದ್ದೆಯ ಮಂಜುನಾಥ ಗೌಡ ಹಾಗೂ ಅವರ ಸಂಬಂಧಿ ಭದ್ರೆ ಕೃಷ್ಣ ಗೌಡ ಎಂಬುವವರು ಹುಲಿ ದಾಳಿಯಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಇವರಿಬ್ಬರು ಬೈಕ್ ಮೇಲೆ ಯಾಣಾ ಕ್ರಾಸ್ ಮೂಲಕ ಹೋಗುತ್ತಿ ದ್ದಾಗ ದೇವನಮನೆ ಕತ್ರಿಯ ಬಳಿ ಹುಲಿ ಪ್ರತ್ಯಕ್ಷವಾಗಿದೆ.
ಇಬ್ಬರು ಬೈಕ್ ಮೇಲೆ ಬರುತ್ತಿರುವುದನ್ನು ಕಂಡ ಹುಲಿ ಅವರನ್ನು ಸುಮಾರು ಅರ್ಧ ಕಿಲೋ ಮೀಟರ್ ವರೆಗೆ ಬೆನ್ನಟ್ಟಿಕೊಂಡು ಬಂದಿದೆ. ಆಗ ಮಂಜುನಾಥ ಅವರು ಬೈಕ್ ವೇಗವಾಗಿ ಓಡಿಸಿದ್ದಾರೆ.
ಸ್ವಲ್ಪ ದೂರ ಬಂದ ನಂತರ ಬೈಕ್ ನಿಯಂತ್ರಣ ತಪ್ಪಿ ಉರುಳಿದ್ದಿ ಇಬ್ಬರೂ ಗಾಯಗೊಂಡಿದ್ದಾರೆ. ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿದ್ದಾರೆ. ಏಕೆಂದರೆ ಹುಲಿ ಸ್ವಲ್ಪ ಬೆನ್ನಟ್ಟಿಕೊಂಡ ಬಳಿಕ ಮರಳಿದೆ. ಇಲ್ಲದೆ ಇದ್ದಿದ್ದರೆ ಇಬ್ಬರು ಹುಲಿಗೆ ಹಾರವಾಗಬೇಕಿತ್ತು.
`ನಮ್ಮನ್ನು ಹುಲಿ ಅಟ್ಟಿಸಿಕೊಂಡು ಬಂದಿತ್ತು. ಅದನ್ನು ನೋಡಿ ವಾಹನವನ್ನು ವೇಗವಾಗಿ ಓಡಿಸಿದೆ. ಆದರೂ ಹುಲಿ ಬೆನ್ನಟ್ಟಿತ್ತು. ಬಳಿಕ ನಾವು ಜೋರಾಗಿ ಕೂಗಿಕೊಂಡಾಗ ಅದು ಪರಾರಿಯಾಗಿದೆ’ ಎಂದು ಭಯದ ಕ್ಷಣಗಳನ್ನು ಮಂಜುನಾಥ ಗೌಡ ವಿವರಿಸಿದರು.
ಮತ್ತಿಘಟಟ್ಟ ಸುತ್ತಮುತ್ತಲು ಕಾಣಿಸಿಕೊಂಡಿರುವ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತವಾಗಬೇಕಿದೆ. ಇಲ್ಲದೇ ಇದ್ದಿದ್ದರೆ ಗ್ರಾಮಸ್ಥರು ಹುಲಿಗೆ ಹಾರವಾಗುವುದರಲ್ಲಿ ಸಂಶಯವೇ ಇಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9986715401