ರಾಜಕೀಯ

ಟಿಪ್ಪು ಜಯಂತಿ ಮಾಡಿದ್ರೆ ಅಧಿಕಾರ ಕಳೆದುಕೊಳ್ತೀರಿ : ಪ್ರತಾಪ್ ಸಿಂಹ

Published

on

ಸುದ್ದಿದಿನ ಡೆಸ್ಕ್ : “ಟಿಪ್ಪು ಜಯಂತಿ ಮಾಡಿದ್ರೆ ಅಧಿಕಾರ ಕಳೆದುಕೊಳ್ತೀರಿ” ಎಂದು ಸುದ್ದಿಗೋಷ್ಟಿಯಲ್ಲಿ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಎಚ್ಚರಿಕೆ‌ ನೀಡಿದ್ದಾರೆ.

ಟಿಪ್ಪು ಜಯಂತಿ ಮಾಡಿದ್ದ ಪರಿಣಾಮವೇ ಸಿದ್ದರಾಮಯ್ಯ ಸೊತಿದ್ದು. ಹಠ ಮಾಡಿ ಜಯಂತಿ ಮಾಡಿದ್ದ ಸಿದ್ದರಾಮಯ್ಯ ತಮ್ಮ ತವರಿನಲ್ಲೇ ನೆಲೆ ಕಳೆದುಕೊಂಡ್ರು‌ ಎಂದು ಸಿದ್ದರಾಮಯ್ಯ ಸೋಲನ್ನ ಮತ್ತೆ ಕುಟುಕಿದ್ದಾರೆ ಸಂಸದ ಪ್ರತಾಪ್ ಸಿಂಹ.

ಕುಮಾರಸ್ವಾಮಿ ಅವ್ರು ಇದನ್ನ ಮನಗಾಣಬೇಕು.
ಟಿಪ್ಪು ಜಯಂತಿ ಆರಂಭ ಮಾಡಿದ್ದರಿಂದಲೇ ಕಾಂಗ್ರೆಸ್ ಅದಕ್ಕೆ ಜೋತುಬಿದ್ದಿದೆ.ನೀವು ಮುಖ್ಯಮಂತ್ರಿಗಳು ಸರಿಯಾದ ತೀರ್ಮಾನ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಪ್ರತಾಪ್ ಸಿಂಹ ಕಿವಿಮಾತು‌ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version