ಬಹಿರಂಗ
ಮೇ 04 ; ಮರೆಯಲಿ ಹೇಗೆ..?
- ಜಿ. ಟಿ ಸತ್ಯನಾರಾಯಣ ಕರೂರು
ಇಂದು ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ವೀರಮರಣವಪ್ಪಿದ ದಿನ. ಪ್ರಪಂಚದ ಇತಿಹಾಸದಲ್ಲಿ ಯುದ್ಧ ಒಪ್ಪಂದವೊಂದರಲ್ಲಿ ಕಾಲ ಮಿತಿಯಲ್ಲಿ ಯುದ್ಧ ಖರ್ಚನ್ನು ನೀಡುವ ತನಕ ತನ್ನ ಮಕ್ಕಳನ್ನು ಬ್ರಿಟಿಷ್ ಸೇನೆಗೆ ಒಪ್ಪಿಸಿ ದೇಶ ಪ್ರೇಮ ಮೆರೆದ ಮತ್ತೊಬ್ಬ ರಾಜ ಸಿಗುವುದಿಲ್ಲ.
ಸೋಲೊಪ್ಪಿಕೊಂಡು ಜೀ ಹುಜೂರ್ ಹೇಳಿಕೊಂಡು ಸಿಂಹಾಸನದ ಮೇಲೆ ಮುಂದುವರಿಯುವ ಅವಕಾಶವಿದ್ದರೂ ತಿರಸ್ಕಾರ ಮಾಡಿ ಪಲಾಯನವೂ ಮಾಡದೇ ರಣ ಸೇನಿಯಾಗಿ ಹೋರಾಟದಲ್ಲಿ ಮಡಿದ ಟಿಪ್ಪು ಸಂಚಿಗೆ ಅಂದಿನಿಂದ ಇಂದಿನವರೆಗೂ ಬಲಿಯಾಗುತ್ತಾ ಇದ್ದಾನೆ. ಎಷ್ಟೇ ಸಂಚುಗಳು ಎದುರಾದರೂ ಟಿಪ್ಪು ಮತ್ತೆ ಮತ್ತೆ ತನ್ನ ವೀರತ್ವ ಬದ್ಧತೆ ಮತ್ತು ಆಡಳಿತ ಸುಧಾರಣೆಯಂತ ಹಲವು ಕಾರಣಕ್ಕೆ ಜನ ಮಾನಸದಲ್ಲಿ ಉಳಿದು ಹೋಗಿದ್ದಾನೆ.
ಪ್ರಪಂಚದ ಮೊದಲ ರಾಕೆಟ್ ತಂತ್ರಜ್ಞಾನದ ಪಿತಾಮಹ ಟಿಪ್ಪು ಎನ್ನುವುದು ಅಮೆರಿಕಾದ ನಾಸಾ ವೇ ಒಪ್ಪಿಕೊಂಡು ಅಧಿಕೃತ ಘೋಷಣೆ ಮಾಡಿದೆ. ಬ್ರಿಟಿಷರ ಶತ್ರುಗಳನ್ನ ಸಂಘಟಿಸಿ ಆಧುನಿಕ ತಂತ್ರಜ್ಞಾನ ಮೂಲಕ ಭಾರತೀಯ ಶೌರ್ಯ ಜೋಡಿಸಿ ವಸಹಾತುಶಾಹಿಗೆ ವಿಮೋಚನೆ ಕೊಡಬಹುದು ಎಂಬ ದೂರ ದೃಷ್ಟಿ ಯುದ್ದ ಚತುರ ಟಿಪ್ಪು ತನ್ನ ಬಹುತೇಕ ಬದುಕಿನ ಸಮಯವನ್ನು ಯುದ್ಧ ಭೂಮಿಯಲ್ಲಿ ಕಳೆದರೂ ಆತನ ಆಡಳಿತ ಸುಧಾರಣಾ ಕ್ರಮ ಕಲ್ಯಾಣ ಕರ್ನಾಟಕದ ಭಾಗ ಆಗಿತ್ತು ಎನ್ನುವುದಕ್ಕೆ ಹಲವು ಸಾಕ್ಷಿ ಇವೆ.
ಸರಳ ಹೇಳಬೇಕು ಎಂದರೆ ಈಗ ನಾವು ಸೊಸೈಟಿ ಮೂಲಕ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲಗಳನ್ನ ಪಡೆಯುತ್ತೇವೆ. ರೈತರಿಗೆ ಈ ರೀತಿ ಸಾಲ ನೀಡುವ ಯೋಜನೆ ಆರಂಭಿಸಿದ್ದೆ ಟಿಪ್ಪು. ಭೂಮಿಯ ಹಕ್ಕು ಮೇಲ್ಜಾತಿಯವರ ಕೈಲಿ ಇರುವ ಕಾಲದಲ್ಲಿ ರಾಜ್ಯದ ಒಳಗೆ ತನ್ನ ವಿರುದ್ಧ ಕತ್ತಿ ಮಸೆಯುತ್ತಾ ಇದ್ದ ಪಾಳೇಗಾರರ ಸೋಲಿಸಿ ಅವರ ಭೂಮಿಯನ್ನು ಭೂರಹಿತರಿಗೆ ಮುಖ್ಯವಾಗಿ ದಲಿತರಿಗೆ ಹಂಚಿ ಸಾಮಾಜಿಕ ನ್ಯಾಯದಲ್ಲಿ ನಡೆದ ಅತಿ ವಿರಳ ರಾಜ ನಮ್ಮ ಟಿಪ್ಪು. ಈ ಕಾರಣಕ್ಕೆ ಇಂದಿಗೂ ಮೈಸೂರು ಪ್ರಾಂತ್ಯದಲ್ಲಿ ಅತಿ ಹೆಚ್ಚು ದಲಿತರು ಭೂಮಿ ಪಡೆದು ಸ್ವಾತಂತ್ರ್ಯ ಭಾರತ ನೌಕರಶಾಹಿಯಲ್ಲಿ ಸ್ಥಾನ ಮಾನ ಪಡೆದಿದ್ದಾರೆ.
ನಮಗೆ ಇನ್ನೂ ಪರಿಪೂರ್ಣ ಒಂದು ಪರಿಸರ ಪ್ರಜ್ಞೆಯ ರಾಜ್ಯ ಆಡಳಿತ ದಕ್ಕಿಲ್ಲ. ಟಿಪ್ಪು ಆಡಳಿತದಲ್ಲಿ ನೀಡಿರುವ ಸುತ್ತೋಲೆಗಳು ಅಧ್ಯಯನ ಮಾಡಿದರೆ ಮರಗಳ್ಳರಿಗೆ ಸಿಂಹಸ್ವಪ್ನವಾಗುವ ಕಾನೂನು ರಚನೆ ಆಗಿದ್ದು ಅರ್ಥವಾಗುತ್ತದೆ. ಸಂವಿಧಾನ ಜಾರಿಗೆ ಬರುವ 150 ವರ್ಷಗಳ ಮುಂಚೆ ಮಹಿಳಾ ಹಕ್ಕುಗಳ ಬಗ್ಗೆ ದ್ವನಿಯಾಗಿದ್ದ. ಮಲಬಾರ್ ಪ್ರಾಂತ್ಯದಲ್ಲಿ ಬಹುಸಂಖ್ಯಾತರಾದ ಈಡಿಗ( ಈಳಿಗ) ಸಮುದಾಯದ ಹೆಣ್ಣು ಮಕ್ಕಳು ಎದೆ ಮೇಲೆ ಸೆರಗು ಹಾಕಿಕೊಳ್ಳಲು ನೀಡಬೇಕಿದ್ದ ಕರವನ್ನ ನಿಷೇಧಿಸಿ ಅಂತ ದುರುಳ ನೀತಿ ಹಿಂದಿನ ದುಷ್ಟತನ ತಾರತಮ್ಯವನ್ನ ಪಾಲನೆ ಮಾಡುತ್ತಾ ಇದ್ದ ಭೂ ಮಾಲಿಕರು ಮತ್ತು ಪಾಳೇಗಾರರನ್ನ ದಂಡಿಸಿ ಮಹಿಳಾ ಶೋಷಕರ ವಿರುದ್ದ ತಿರುಗಿಬಿದ್ದವ ಟಿಪ್ಪು.
ಟಿಪ್ಪುವಿನ ಕೊನೆಯ ಕ್ಷಣ ತೀವ್ರ ಗಾಯಗೊಂಡ ಟಿಪ್ಪು ನೆಲಕ್ಕೆ ಉರುಳುತ್ತಾನೆ. ಆತನ ಶಿರಸ್ತ್ರಾಣ ಮತ್ತು ಖಡ್ಗ ಕಸಿಯಲು ಬ್ರಿಟಿಷ್ ಸೈನಿಕರು ಮುಂದಾದಾಗ ಟಿಪ್ಪು ಪ್ರತಿರೋಧ ಒಡ್ಡುತ್ತಾನೆ. ಅದೇ ವೀರತ್ವದ ಕೊನೆ ಕ್ಷಣ. ಮರು ಕ್ಷಣವೇ ಟಿಪ್ಪು ಸಾಮಾನ್ಯ ಸೈನಿಕನ ಕೈಲಿ ಪ್ರಾಣ ಬಿಡುತ್ತಾನೆ.
ಯುದ್ಧ ಭೂಮಿಯಲ್ಲಿ ಕನಸಿನಲ್ಲಿ ಸಿಂಹಸ್ವಪ್ನವಾಗಿ ಕಾಡಿದ್ದ ಟಿಪ್ಪು ರಣ ಭೂಮಿಯಲ್ಲಿ ಹಾಗೆ ತೀರಿ ಹೊದ್ದದ್ದು ನಿಜ ಎಂದು ಒಪ್ಪಿಕೊಳ್ಳಲು ಬ್ರಿಟಿಷ್ ಸೇನೆಗೆ ಸಮಯ ಹಿಡಿದಿತ್ತು. ಮಹಾರಾಜರುಗಳು ಬ್ರಿಟಿಷ್ ರ ಅಧೀನ ಅರಸರಾಗಿ ಕಪ್ಪ ಕೊಟ್ಟುಕೊಂಡು ಸಿಂಹಾಸನ ಉಳಿಸಿಕೊಳ್ಳುವ ಕಾಲದಲ್ಲಿ ಟಿಪ್ಪು ಹಾಗೆ ಯುದ್ಧ ಬಯಲಲ್ಲಿ ಕತ್ತಿ ಹಿಡಿದು ಹೋರಾಡಿ ಮರಣ ಹೊಂದಿದ್ದು ಒಂದು ಚರಿತ್ರೆಯಾಗಿ ಅಂದಿಗೂ ಇಂದಿಗೂ ಉಳಿದಿದೆ.
ಟಿಪ್ಪುವಿನ ಬೆನ್ನಿಗೆ ಇರಿದು ಬ್ರಿಟಿಷ್ ಜತೆ ಒಳ ಒಪ್ಪಂದ ಮಾಡಿಕೊಂಡು 1799 ರ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೇನೆಯ ರಹಸ್ಯ ಮತ್ತು ಫಿರಂಗಿಗಳಿಗೆ ಎಣ್ಣೆ ಸುರಿದ ಬಸಪ್ಪಶೆಟ್ಟಿ ಮತ್ತು ಮೀರ್ ಸಾಧಿಕ್ ಹೆಸರು ಇಂದಿಗೂ ಮೈಸೂರು ಪ್ರಾಂತ್ಯದಲ್ಲಿ ವ್ಯರ್ಜ್ಯ. ಮಕ್ಕಳಿಗೆ ಈ ಹೆಸರು ಇಂದಿಗೂ ಇಡುವುದಿಲ್ಲ. ಇದು ನೆಲವೊಂದು ಜನಾನುರಾಗಿ ಅರಸನನ್ನು ನೋಡುವ ನೆನೆಯುವ ಪರಿ. ಹೆಂಗಸರು ಲಾವಣಿ ಕಟ್ಟಿ ನೆಲ ಬಿತ್ತುವಾಗ ಉತ್ತುವಾಗ ಹೀಗೆ ಹಾಡುತ್ತಾರೆ. ಅನ್ಯಾಯ ಖಂಡಿಸುವ ಈ ಬಗೆಯೇ ಇದಕ್ಕೆ ಸಾಕ್ಷಿ.
ಬಸಪ್ಪ ಶೆಟ್ಟಿ ಮೀರ್ ಸಾಧಿಕ್
ಮಸಲತ್ತು ಮಾಡ್ಯಾರ
ನಡು ರಾತ್ರಿಲಿ ಫಿರಂಗಿಗೆಲ್ಲ
ಎಣ್ಣೆ ಸುರಿದಾರ
ದಂಡಿಗೆ ಸಂಚು ಹೂಡಿ
ತಾಯ್ಗಂಡರು ಮಸಲತ್ತು ಮಾಡ್ಯಾರೋ
ಟಿಪ್ಪು ನೀ ನೆಲದ ಸರದಾರ
ಹುತಾತ್ಮ ನಿನ್ನ ಸ್ಮರಿಸುವೆವಯ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243