ದಿನದ ಸುದ್ದಿ

ತುಂಗಭದ್ರ ಜಲಾಶಯದ ಒಳ ಹರಿವು ಹೆಚ್ಚಳ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ತುಂಗಭದ್ರ ಜಲಾಶಯದ ಒಳ ಹರಿವು ಮತ್ತೆ ಹೆಚ್ಚಿದೆ. ಇಂದು 1 ಲಕ್ಷದ 4 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1 ಸಾವಿರದ 633 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 1 ಸಾವಿರದ 614.31 ಅಡಿ ತಲುಪಿದೆ. ಜಲಾಶಯದಲ್ಲಿ 47 ಟಿಎಂಸಿ ನೀರು ಸಂಗ್ರಹವಾಗಿದೆ.

ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 106 ಟಿಎಂಸಿಯಾಗಿದೆ. ತುಂಗಭದ್ರ ಬಲದಂಡೆ ಕೆಳ ಮಟ್ಟದ ಕಾಲುವೆಗೆ ಕೃಷಿ ಚಟುವಟಿಕೆಗಾಗಿ 300 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version