ಲೈಫ್ ಸ್ಟೈಲ್

ಪಾದರಕ್ಷೆಗೂ ಬಂತು ಛತ್ರಿ..!

Published

on

ಹಬ್ಬ ಹರಿದಿನವನ್ನೂ ಲೆಕ್ಕಿಸದೆ ಎಡಬಿಡದೆ ಸುರಿಯುತ್ತಿರುವ ಮಳೆರಾಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಮಳೆಯಲ್ಲಿ ಹೊರಗಡೆ ನಡೆದಾಡಲು ಹಿಂದೆ-ಮುಂದೆ ನೋಡುವುದು ಸಾಮಾನ್ಯ. ಮಳೆಗಾಲದಲ್ಲಿ ರಸ್ತೆ ಗಳಲ್ಲಿ ನಿಂತ ನೀರು, ಕೊಚ್ಚೆ, ಮಳೆಯ ಹನಿಗಳಿಗೆ ಅಂಜಿಕೆ ಮನೆಯಲ್ಲಿಯೇ ಕುಳಿತುಕೊಳ್ಳ ಬಯಸುವವರಿಗೆ ಒಂದು ಸಿಹಿ ಸುದ್ದಿ!

ಮಳೆಗಾಲದಲ್ಲಿ ಕೊಡೆ ಬಳಸುವುದು ಸರ್ವೇ ಸಾಮಾನ್ಯ, ಆದರೇ ಪಾದರಕ್ಷೆಗಳಿಗೂ  ಕೊಡೆ ಬಂದಿದೆ! ಇದು ಅಪ್ಪಟ ಸಹ ಸತ್ಯ. ಮಳೆಗಾಲಕ್ಕೆ ಹೊಸಾ ಫ್ಯಾಷನ್ ತಲೆ ಎತ್ತಿದೆ. ಪುಟ್ಟ ಪುಟ್ಟ ಚೆಂದದ ಛತ್ರಿಗಳನ್ನು ಪಾದರಕ್ಷೆಗಳಿಗೆ ಅಂಟಿಸಲಾಗುತ್ತದೆ. ಮಳೆಯ ಸಂದರ್ಭದಲ್ಲಿ ಅದನ್ನು ತೆರೆಯ ಬಹುದು, ಇಲ್ಲವೇ ಛತ್ರಿ ಮುಚ್ಚಿಡಲೂ ಬಹುದು. ನಿಮಗೂ ಈ ವಿನೂತನ ವಿನ್ಯಾಸದ ಕೊಡೆಯನ್ನು ಪಾದರಕ್ಷೆ ಕೊಳ್ಳುವ ಆಸೆ ಇದ್ದಲ್ಲಿ ಆನ್ಲೈನ್ ನಲ್ಲಿ ಇದು ಲಭ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version