ದಿನದ ಸುದ್ದಿ

ಶ್ರೀರಾಮನಿಗೆ ಅಸ್ತಿತ್ವ ಕೊಟ್ಟ ಮಹಾಕವಿ ಮಹರ್ಷಿ ವಾಲ್ಮೀಕಿ : ಪ್ರೊ. ಅಮೃತೇಶ್ವರ ಬಿ ಜಿ

Published

on

ಸುದ್ದಿದಿನ, ಚನ್ನಗಿರಿ : ಶ್ರೀರಾಮನಿಗೆ ಅಸ್ತಿತ್ವ ಕೊಟ್ಟ ಮಹಾಕವಿ ಮಹರ್ಷಿ ವಾಲ್ಮೀಕಿ ಎಂದು ಪ್ರಾಂಶುಪಾಲರಾದ ಪ್ರೊ. ಅಮೃತೇಶ್ವರ ಬಿ ಜಿ ಅವರು ನುಡಿದರು.

ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತರ ಕೇಂದ್ರ ಹಾಗೂ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಶನಿವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಶ್ರೀ ಮಹರ್ಷಿ ವಾಲ್ಮೀಕಿ ಭಾರತದ ಆದಿ ಕವಿ. ರಾಮಾಯಣ ಕೃತಿಯ ಮೂಲಕ ಭಾರತದ ಪರಂಪರೆಯನ್ನು ಕಟ್ಟಿಕೊಟ್ಟ ಮಹಾಪುರುಷ. ಅವರ ಆದರ್ಶಗಳನ್ನ ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅವರ ಬಗ್ಗೆ ಇರುವ ಕಟ್ಟುಕತೆಗಳನ್ನು ನಂಬಬಾರದು ಎಂದು ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಪ್ರೊ. ಷಣ್ಮುಖಪ್ಪ ಕೆ ಎಚ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮಹರ್ಷಿ ವಾಲ್ಮೀಕಿಯ ರಾಮಾಯಣ ಮಹಾಕಾವ್ಯ ಕಾವ್ಯ ಪರಂಪರೆಯ ಮಹತ್ವದ ಕೃತಿ ಎಂದು ಡಾ. ರವಿ ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಡಾ‌.ಮಹಮ್ಮದ್ ಖಾನ್, ಪ್ರೊ.ದಾದಾಪೀರ್, ಪ್ರೊ,ಜಯ್ಯಪ್ಪ, ಪ್ರೊ.ವಿಜಯ್ ಕುಮಾರ್, ಪ್ರೊ.ಪಾರ್ವತಮ್ಮ, ದೈಹಿಕ ನಿರ್ದೇಶಕರಾದ ಕಲ್ಲಪ್ಪ, ಹಾಗೂ ಇತರ ಬೋಧಕವರ್ಗ ಹಾಗು ಬೋಧಕೇತರವರ್ಗದ ಸಿಬ್ಬಂದಿಗಳು ಉಪಸ್ಥತರಿದ್ದರು.

ಕುಮಾರಿ ರೇಣುಕಾ ಪ್ರಾರ್ಥಿಸಿದರು, ಕುಮಾರಿ ಸುಮತಿ ನಿರೂಪಣೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version