ದಿನದ ಸುದ್ದಿ
ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಯುವ ಪತ್ರಕರ್ತ ವಿಜಯ್ ತಾಯಿಯ ಜೀವನಕ್ಕೆ ನೆರವಾಗೋಣ
ಇವರು ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಯುವ ಪತ್ರಕರ್ತ, ಉದಯವಾಣಿ ವರದಿಗಾರ ವಿಜಯ್ ಕೆಂಗಲಹಳ್ಳಿ ಅವರ ತಾಯಿ ಹಾಲಮ್ಮ. ಇವರು ಕುಟುಂಬದ ಆಧಾರವಾಗಿದ್ದ ಹಿರಿಯ ಪುತ್ರ ವಿಜಯ್ ಅವರನ್ನು ಕಳೆದುಕೊಂಡಿದ್ದಾರೆ.
ಇವರದು ಮರಾಠ ಸಮುದಾಯದ ಮಧ್ಯಮ ವರ್ಗದ ಕುಟುಂಬ. ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಂಗಲಹಳ್ಳಿ ಗ್ರಾಮದ ವಾಸಿ. ಹುಟ್ಟಿನಿಂದಲೇ ಅಂಗವೈಕಲ್ಯ ಆವರಿಸಿದ್ದರೂ ಕೂಲಿ, ಒಂದೆರಡು ಎಕರೆ ಜಮೀನು ನೆಚ್ಚಿ ಜೀವನ ಸಾಗಿಸುತ್ತಿದ್ದರು. ಪತಿ ಚಂದ್ರಪ್ಪ ಅವರು ಮದ್ಯಸೇವನೆ ದುಶ್ಚಟದಾಸರಾಗಿದ್ದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಯ ಜವಾಬ್ದಾರಿ ಇವರದೇ ಆಗಿತ್ತು.
ಕಷ್ಟದಲ್ಲೆ ತನ್ನಿಬ್ಬರು ಮಕ್ಕಳ ಓದಿಸುವ ಸವಾಲು ಸ್ವೀಕರಿಸಿದ ಆ ತಾಯಿ. ಓದಿನಲ್ಲಿ ಮುಂದಿದ್ದ ಹಿರಿಯ ಪುತ್ರ ವಿಜಯ್ ಅವರಿಗೆ ಎಂಎ ಪತ್ರಿಕೋದ್ಯಮ ಪದವಿ ಕೊಡಿಸಿದ್ದರು. ಇನ್ನೊಬ್ಬ ಮಗ ತನಾಜಿರಾವ್ ಅಣ್ಣನ ವಿದ್ಯಾಭ್ಯಾಸಕ್ಕಾಗಿ ತಾನು ಓದು ಅರ್ಧಕ್ಕೆ ನಿಲ್ಲಿಸಿ ಮನೆಗೆ ನೆರವಾಗಿದ್ದ. ತನ್ನ ತಾಯಿ, ತಮ್ಮನ ತ್ಯಾಗದ ಅರಿವಿದ್ದ ವಿಜಯ್ ಕೂಡ ಎಂಎ ಪದವಿ ಮುಗಿಸಿ, ಲೋಕಲ್ ಪತ್ರಿಕೆ ದಾವಣಗೆರೆ ನಗರವಾಣಿಯಲ್ಲಿ ಕೆಲಸವೂ ಗಿಟ್ಟಿ ಸಿದ್ದ. ನಂತರ ರಾಜ್ಯಮಟ್ಟದ, ಪ್ರಜಾವಾಣಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದ.ನಂತರ ಉದಯವಾಣಿ ಪತ್ರಿಕೆ ಸೇರಿದ್ದ. ವಿಜಯ್ ಉದ್ಯೋಗದಿಂದ ಸ್ವಲ್ಪಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಕುಟುಂಬದ ಜವಾಬ್ದಾರಿ ಹೊತ್ತ ತಾಯಿಗೆ ಪತಿ ಚಂದ್ರಪ್ಪ, ಅವರ ಭಾವ(ಪತಿಯ ತಂದೆ)ರನ್ನು ಕಳೆದುಕೊಂಡರೂ ಬುದ್ಧಿವಂತ ಹಿರಿಯ ಮಗನ ಬಲದಿಂದ ಜೀವನದ ಬಂಡಿ ಸಾಗಿಸುತ್ತಿದ್ದರು.
ಆದರೆ, ಕುಟುಂಬದ ಸಂಕಷ್ಟ ದೂರವಾಗುತ್ತಿದೆ ಎನ್ನುವವಷ್ಟರಲ್ಲೆ ಆ ವಿಧಿ ಹಿರಿಯ ಮಗನನ್ನೂ ಕಿತ್ತುಕೊಂಡಿದೆ. ಹಿರಿಯ ಪುತ್ರ ವಿಜಯ್ ಅವರನ್ನೆ ನಂಬಿಕೊಂಡ ಆ ಕುಟುಂಬ ಇನ್ನಷ್ಟು ಸಂಕಷ್ಟ ಎದುರಿಸುತ್ತಿದೆ. ಮೇಲಿಂದ ಮೇಲೆ ನೋವು ಅನುಭವಿಸಿದ ತಾಯಿಗೂ ಈಗ ವಯಸ್ಸಾಗಿದೆ, ಕಿರಿಯ ಮಗ ತನಾಜಿರಾವ್ ಗೆ ಅಷ್ಟೊಂದು ವ್ಯವಹಾರಿಕ ಜ್ಞಾನ ಇಲ್ಲ.
ವಿಜಯ್ ತನ್ನ ಊರ ಹೊರಗಿನ ಜಮೀನಿನಲ್ಲಿ ನಿರಂತರ ಹತ್ತಾರು ವರ್ಷಗಳಿಂದ ಮನೆ ಕಟ್ಟುತ್ತಿದ್ದ. ಬೇಸ್ಮೆಂಟ್ ಮಾಡಿಬಿಟ್ಟು, ಮೂರು ವರ್ಷಗಳ ನಂತರ ಗೋಡೆ ಕಟ್ಟಿಸಿದ. ಮತ್ತೆ ಗ್ಯಾಪ್ ಕೊಟ್ಟು ಹಂತ ಹಂತವಾಗಿ ಗೂಡು ಸಿದ್ಧಪಡಿಸಿದ್ದ. ಮನೆ ಪೂರ್ಣಗೊಂಡ ನಂತರ ಹೊಲ, ಮನೆ ಕೆಲಸಗಳಿಗೆ ಮಾಡಿದ ಸಾಲ ತೀರಿಸಿ ಮದುವೆಯಾಗುವ ಕನಸು ಕಂಡಿದ್ದ.
ಆದರೀಗ ಕುಟುಂಬ ನಿರ್ವಹಣೆ ಜವಾಬ್ದಾರಿ ಆ ತಾಯಿಯ ಹೆಗಲ ಮೇಲೆ ಇದೆ. ಕುಟುಂಬದ ಆಧಾರವಾಗಿದ್ದ ವಿಜಯ್ ಸಾವಿನಿಂದ ನೊಂದ ಕುಟುಂಬಕ್ಕೆ ಕೈಲಾದಷ್ಟು ನೆರವು ನೀಡೋಣ.
ಕುಟುಂಬಕ್ಕೆ ನೆರವು ನೀಡಲು ಬಯಸುವವರು ವಿಜಯ್ ರ ತಾಯಿ ಸಿ.ಹಾಲಮ್ಮ ಅವರ ಬ್ಯಾಂಕ್ ಅಕೌಂಟ್ ನಂಬರ್ ಗೆ ಕೈಲಾದಷ್ಟು ಸಹಾಯ ಮಾಡಬಹುದು.
ಬ್ಯಾಂಕ್ ಖಾತೆ ವಿವರ
C. Halamma
Account no 64116886648
IFSC : SBIN0040413
Kulambi Branch
State Bank Of India
ಕುಟುಂಬ ಸಂಪರ್ಕಿಸಲು ಮೊ.ನಂ. 9164051775, ಸ್ನೇಹಿತರೇ ಸಾಧ್ಯವಾದಷ್ಟು ಶೇರ್ ಮಾಡಿ, ಆ ಕುಟುಂಬಕ್ಕೆ ನೆರವಾಗೋಣ.
–ವಿಜಯ್ ಕೆಂಗಲಹಳ್ಳಿ ಸ್ನೇಹಿತರು
ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243