ಸಿನಿ ಸುದ್ದಿ

ಅಸ್ಲಿ ಆಟ ಇವಾಗ್ ಶುರು..! ಅಂದ್ರು ಕಿಚ್ಚ ಸುದೀಪ

Published

on

ಸುದ್ದಿದಿನ ಡೆಸ್ಕ್: ಕನ್ನಡದ ಬಹುನಿರೀಕ್ಷಿತ ಸಿನೆಮಾ ‘ವಿಕ್ರಾಂತ್ ರೋಣ’ ಕಿಚ್ಚ ಸುದೀಪ ಅಭಿನಯದ ಈ ಸಿನೆಮಾ ಇನ್ನೇನು ತೆರೆಗೆ ಬರಲಿದೆ. ಹಲವು ಭಾಷೆಗಳಲ್ಲಿ ತಯಾರಾಗಿರುವ ಈ ಸಿನೆಮಾ ಮೊದಲು ಕನ್ನಡ ಭಾಷೆಯಲ್ಲಿ ತೆರೆಕಾಣಲಿದೆ ಎಂದ ಗುಟ್ಟನ್ನು ಟೀಸರ್ ಮೂಲಕ ರಟ್ಟು ಮಾಡಿದೆ ಚಿತ್ರತಂಡ.

ಇಂಗ್ಲಿಶ್ ಭಾಷೆಯಲ್ಲಿಯೂ ಡಬ್ ಆಗಿರುವ ಈ ಸಿನೆಮಾಗೆ ಬುಧವಾರ ಕಿಚ್ಚ ಸುದೀಪ್ ಡಬ್ ಮಾಡಿರುವ ವಿಡಿಯೋದ ತುಣುಕೊಂದನ್ನು ಸಿನೆಮಾ ನಿರ್ದೇಶಕ ಅನೂಪ್ ಬಂಡಾರಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟನ್ನು ಸುದೀಪ್ ಕೂಡ ಹಂಚಿಕೊಂಡಿದ್ದಾರೆ.

ಇಂಗ್ಲಿಷ್ ಭಾಷೆಯಲ್ಲಿ ಡಬ್ ಮಾಡಿದ ದೃಶ್ಯದ ತುಣುಕೊಂದನ್ನು ನಿನ್ನೆ ಹಂಚಿಕೊಂಡಿದ್ದ ಸುದೀಪ್ ಗುರುವಾರ ಕನ್ನಡದ ದೃಶ್ಯವನ್ನೂ ತಮ್ಮ ಫೇಸ್ ಬುಕ್ , ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು “ನಿನ್ನೆ ಬಿಡುಗಡೆಯಾದ ತುಣುಕು…ಕನ್ನಡದಲ್ಲಿ!ಅಸ್ಲಿ ಆಟ ಇವಾಗ್ ಶುರು! #VikrantRona” ಎಂದು ವಿಡಿಯೋ ಜತೆಗೆ ಪೋಸ್ಟ್ ಮಾಡಿದ್ದಾರೆ.

ವಿಡಿಯೋ

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fb.watch/bwAjj0bp2v/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version