ಲೈಫ್ ಸ್ಟೈಲ್
ರೋಗ ನಿರೋಧಕ ಶಕ್ತಿ ಹೆಚ್ಚಿಸೋ ‘ವಿಟಮಿನ್-ಸಿ’ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!
ಸುದ್ದಿದಿನ ಡೆಸ್ಕ್ : ನಮ್ಮ ದೇಹಕ್ಕೆ ಪ್ರತಿಯೊಂದು ವಿಟಮಿನ್‍ಗಳು ಕೂಡ ಮುಖ್ಯ. ಒಂದರ ಕೊರತೆ ಕಾಣಿಸಿದರೂ ಅದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವು ವಿಟಮಿನ್ ಗಳು ನಮಗೆ ಆಹಾರಗಳಿಂದ ಲಭ್ಯವಾಗುವುದು. ದ್ರವಾಹಾರವಾಗಿರುವಂತಹ ವಿಟಮಿನ್ ಸಿಯು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ದೇಹದ ಸಂಯೋಜಕ ಅಂಗಾಂಶಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಕೂಡ ಇದೆ.
- ವಿಟಮಿನ್ -ಸಿ ದೇಹದಲ್ಲಿ ರೋಗ ನಿರೋಧಕಶಕ್ತಿಯನ್ನುಹೆಚ್ಚಿಸುತ್ತದೆ ಮತ್ತು ರೋಗಣುಗಳಜೊತೆಹೋರಾಡುತ್ತದೆ,ಸೋಂಕನ್ನು ತಡೆಗಟ್ಟುತ್ತದೆ.
- ವಸಡಿನಿಂದ ಉಂಟಾಗುವ ರಕ್ತಸ್ರಾವವನ್ನುಪೂರ್ತಿಯಾಗಿ ಕಡಿಮೆಮಾಡಿ ವಾಸಿ ಮಾಡುತ್ತದೆ.
- ಚರ್ಮದ ಸುಕ್ಕನ್ನು ತಡೆಗಟ್ಟಿ,ಚರ್ಮಕ್ಕೆಕಾಂತಿಯನ್ನುನೀಡುತ್ತದೆ,ಅಷ್ಟೆಅಲ್ಲದೆ ತುಂಬಾಅಧಿಕವಾಗಿ ಉತ್ಕರ್ಷಣಶಕ್ತಿಯನ್ನು ಹೊಂದಿದೆ.
- ನೆಗಡಿ,ಕೆಮ್ಮನ್ನು ಕೂಡ ಕಡಿಮೆ ಮಾಡುತ್ತದೆ.ಅವುಗಳಿಗೆಔಷಧಿಯಾಗಿ ಕೆಲಸ ಮಾಡುತ್ತದೆ.
- ಅಷ್ಟೇ ಅಲ್ಲದೆ ನಮ್ಮ ರಕ್ತದಲ್ಲಿರುವ ಬಿಳಿಯ ರಕ್ತಕಣಗಳನ್ನೂಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿ ಪ್ರತಿ ರಕ್ಷಣಾ ಶಕ್ತಿಯನ್ನುಹೆಚ್ಚಿಸುತ್ತದೆ.
ಕೊರತೆ
- ವಿಟಮಿನ್ ಸಿ ದೇಹದಲ್ಲಿ ಉತ್ಪತ್ತಿಯಾಗದೆ ಇರುವ ಕಾರಣದಿಂದ ಹಲವಾರು ಮಂದಿಯಲ್ಲಿ ವಿಟಮಿನ್ ಸಿ ಕೊರತೆ ಕಂಡುಬರುವುದು. ವಿಟಮಿನ್ ಸಿ ಕೊರತೆಯಿಂದ ನಿಮಗೆ ಸ್ಕರ್ವಿ ಉಂಟಾಗಬಹುದು. ಇದರಿಂದಾಗಿ ನೀವು ತುಂಬಾ ನಿಶ್ಯಕ್ತಿಯಿಂದ ಬಳಲಬಹುದು.
- ಈ ಕಾಯಿಲೆಯು ಮೂಳೆ, ಸ್ನಾಯುಗಳ ಬಲ ಮತ್ತು ರೋಗನಿರೋಧಕ ಕುಂದುವಂತೆ ಮಾಡುವುದು. ಅಧಿಕ ರಕ್ತದೊತ್ತಡ, ಮೂತ್ರಕೋಶಗಳ ಕಾಯಿಲೆ, ಪಾರ್ಶ್ವವಾಯು, ಕೆಲವು ಕ್ಯಾನ್ಸರ್ ಗಳು ಅಪಧಮನಿ ಕಾಠಿಣ್ಯ ಇತ್ಯಾದಿಗಳು ಕಾಣಿಸಿಕೊಳ್ಳಬಹುದು.
ವಿಟಮಿನ್ – ಸಿ ಸಿಗುವ ಹಣ್ಣುಗಳು ಹಾಗೂ ತರಕಾರಿಗಳು ಮತ್ತು ಅದರಲ್ಲಿ ಎಷ್ಟು ವಿಟಮಿನ್ – ಸಿ ಇದೆ ಎಂಬುದನ್ನು ತಿಳಿಯೋಣ
- ಕಳಿತ ಪೇರಳೆ ಹಣ್ಣುಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಒಂದು ಪೇರಳೆ ಹಣ್ಣಿನಲ್ಲಿ ದಿನಕ್ಕೆ ಬೇಕಾಗುವ 628 ಶೇ. ವಿಟಮಿನ್ ಸಿ ಇದೆ. ಇದರಿಂದ ಒಂದು ದಿನ ಪೇರಳೆ ಹಣ್ಣು ಸೇವಿಸಿದರೆ ಮರುದಿನ ವಿಟಮಿನ್ ಸಿ ಬಗ್ಗೆ ಚಿಂತೆ ಮಾಡಬೇಕಿಲ್ಲ.
- ಕಿತ್ತಳೆಯು ವಿಟಮಿನ್ ಸಿ ಸಮೃದ್ಧವಾಗಿರುವಂತಹ ಸಿಟ್ರಸ್ ಹಣ್ನಾಗಿದೆ. ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ 163 ಶೇ. ವಿಟಮಿನ್ ಸಿ ಇದೆ.
- ಲಿಂಬೆಹಣ್ಣು ವಿಟಮಿನ್ ಸಿ ಇರುವ ಮತ್ತೊಂದು ಸಿಟ್ರಸ್ ಹಣ್ಣು. 100 ಗ್ರಾಂನಷ್ಟು ಲಿಂಬೆಹಣ್ಣಿನಲ್ಲಿ 53 ಗ್ರಾಂನಷ್ಟು ವಿಟಮಿನ್ ಸಿ ಇದೆ.
- ನೆಲ್ಲಿಕಾಯಿಯು ರುಚಿಯಲ್ಲಿ ಹುಳಿಯಾಗಿದ್ದರೂ ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ನೂರು ಗ್ರಾಂ ನೆಲ್ಲಿಕಾಯಿಯಲ್ಲಿ 27.7 ಮಿ.ಗ್ರಾಂ. ವಿಟಮಿನ್ ಸಿ ಇದೆ
- ಉಷ್ಣವಲಯದ ಹಣ್ಣಾಗಿರುವ ಅನಾನಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ತಾಜಾ ಅನಾನಸ್ ನಲ್ಲಿ 131 ಶೇ. ವಿಟಮಿನ್ ಸಿ ಇದೆ.
- ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ಸ್ಟ್ರಾಬೆರಿಯಲ್ಲಿ 149 ಶೇ. ವಿಟಮಿನ್ ಸಿ ಇದೆ.
- ಕಚ್ಚಾ ಪಪ್ಪಾಯಿಯಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ. ಒಂದು ಕಪ್ ಕಚ್ಚಾ ಪಪ್ಪಾಯಿಯಲ್ಲಿ ದೈನಂದಿನ ಅಗತ್ಯಕ್ಕೆ ಬೇಕಾಗುವ 144 ಶೇ. ವಿಟಮಿನ್ ಸಿ ಇದೆ.
- ಲಿಚೆಯಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ ಮತ್ತು ಇದು ತುಂಬಾ ಸಿಹಿಯಾಗಿದೆ. ಇದು ಅದ್ಭುತ ರುಚಿ ಮತ್ತು ಆರೋಗ್ಯಕಾರಿಯು ಹೌದು. 100 ಗ್ರಾಂ ಲಿಚೆಯಲ್ಲಿ 71.5 ಗ್ರಾಂನಷ್ಟು ವಿಟಮಿನ್ ಸಿ ಇದೆ
- ಕೋಸುಗಡ್ಡೆಯು ತುಂಬಾ ಆರೋಗ್ಯಕಾರಿ ತರಕಾರಿಯಾಗಿದೆ ಮತ್ತು ಇದರಲ್ಲಿ ಅಧಿಕ ಮಟ್ಟದ ವಿಟಮಿನ್ ಸಿ ಇದೆ. ಒಂದು ಕಪ್ ಕಚ್ಚಾ ಕೋಸುಗಡ್ಡೆಯಲ್ಲಿ 135 ಶೇ. ವಿಟಮಿನ್ ಸಿ ಇದೆ.
- ಕಿವಿಯು ಉನ್ನತ ಪ್ರಮಾಣದ ವಿಟಮಿನ್ ಸಿ ಇರುವಂತಹ ಹಣ್ಣು. ಒಂದು ತುಂಡು ಕಿವಿಯಲ್ಲಿ ದಿನಕ್ಕೆ ಸೂಚಿಸಲಾಗಿರುವ ವಿಟಮಿನ್ ಸಿಯ 273 ಮಿ.ಗ್ರಾಂ. ಇದೆ.
- ಕೆಂಪು ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಲಭ್ಯವಿದೆ. ಒಂದು ಕಪ್ ಕೆಂಪು ದೊಣ್ಣೆ ಮೆಣಸಿನಲ್ಲಿ 317 ಮಿ.ಗ್ರಾಂ ವಿಟಮಿನ್ ಸಿ ಇದೆ.
- ಪಾರ್ಸ್ಲಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ ಮತ್ತು ಒಂದು ಕಪ್ ತಾಜಾ ಪಾರ್ಸ್ಲಿಯಲ್ಲಿ 133 ಶೇ. ವಿಟಮಿನ್ ಸಿ ಇದೆ.
- ಹಳದಿ ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಇದೆ. ಒಂದು ದೊಡ್ಡ ದೊಣ್ಣೆ ಮೆಣಸಿನಲ್ಲಿ 341 ಮಿ.ಗ್ರಾಂ ವಿಟಮಿನ್ ಸಿ ಇದೆ
- ಹೂಕೋಸು ವಿಟಮಿನ್ ಸಿ ಇರುವ ಎಲೆಜಾತಿಯ ವಿಭಾಗಕ್ಕೆ ಸೇರಿದ ತರಕಾರಿಯಾಗಿದೆ. ಒಂದು ಕಪ್ ಹಸಿ ಹೂಕೋಸಿನಲ್ಲಿ ಶೇ.77ರಷ್ಟು ವಿಟಮಿನ್ ಸಿ ಇದೆ.
ಮಿಸ್ ಮಾಡ್ದೆ ಇದನ್ನೂ ಓದಿ
https://m.facebook.com/story.php?story_fbid=545041352689181&id=299499370576715
ಸುದ್ದಿದಿನ.ಕಾಂ|ವಾಟ್ಸಾಪ್|9986715401