ದಿನದ ಸುದ್ದಿ
ಚಿತ್ರದುರ್ಗ | ಲಾವರಸದಂತೆ ಉಕ್ಕಿದ ಬೆಂಕಿಯ ಜ್ವಾಲೆ: ಜನರಲ್ಲಿ ಅಚ್ಚರಿ ; ವೀಡಿಯೋ ನೋಡಿ
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಸಮೀಪದ ಮನಮೈನಹಟ್ಟಿ ಜಮೀನಿನೊಂದರಲ್ಲಿ ವಿದ್ಯುತ್ ನಿಂದ ಲಾವಾರಸದಂತೆ ಬೆಂಕಿ ಉತ್ಪತ್ತಿಯಾಗಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಮನಮೈನಹಟ್ಟಿ ಗ್ರಶಮದ ನಾರಾಯಣ ನಾಯ್ಕ್ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದೆ. ಭೂಮಿಯಿಂದ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 11 ಕೆವಿ ವಿದ್ಯುತ್ ಲೈನ್ ಸಮಸ್ಯೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋ ವೈರಲ್
ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ನಡೆದಿದ್ದು, ಗ್ರಾಮಸ್ಥರು ಮಾಡಿದ ವಿಡಿಯೋ ವೈರಲ್ ಆಗಿದೆ. ವಿದ್ಯುತ್ ಕಂಬದ ಮೂಲಕ ಅರ್ತಿಂಗ್ ಬಂದು ಕಂಬದಲ್ಲಿದ್ದ ಕಬ್ಬಿಣ ಬೆಂಕಿಯಾಗಿ ಬಂದಿದೆ ಎಂದು ಸ್ಥಳೀಯರು ಸುದ್ದಿದಿನಕ್ಕೆ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401