ರಾಜಕೀಯ
ಮತಚಲಾವಣೆ : ಉತ್ಸುಕತೆ ಮೆರೆದ ವಿಕಲಚೇತನರು, ಹಿರಿಯ ನಾಗರಿಕರು
ಸುದ್ದಿದಿನ,ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇಂದು ನಡೆದ ಮತದಾನದಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು.
ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಸಾರಿಗೆ ಸೌಲಭ್ಯ ಸ್ವಯಂ ಸೇವಕರ ನೆರವು, ಗಾಲಿಖುರ್ಚಿ, ಭೂತಗಾಜಿನ ಸೌಲಭ್ಯ, ಬ್ರೇಕ್ ಲಿಪಿ ಸೌಲಭ್ಯ ಒದಗಿಸಲಾಗಿತ್ತು. 18ವರ್ಷದೊಳಗಿನ ಸ್ವಯಂ ಸೇವಕರು ಉತ್ಸಾಹದಿಂದ ವಯೋ ವೃದ್ಧರನ್ನು, ವಿಕಲಚೇತನರನ್ನು ಕರೆತಂದು ಮತ ಚಲಾಯಿಸಲು ನೆರವಾಗುತ್ತಿದ್ದುದು ಮೆಚ್ಚುಗೆಗೆ ಕಾರಣವಾಯಿತು.
ಜಿಲ್ಲೆಯಲ್ಲಿ 13.159 ವಿವಿಧ ಪ್ರಕಾರಗಳ ವಿಕಲಚೇತನರನ್ನು ಗುರುತಿಸಿ ಅವರನ್ನು ಮತಗಟ್ಟೆ ಕರೆತರಲು ಸಾರಿಗೆ ಸೌಕರ್ಯ ಕಲ್ಪಿಸಲಾಗಿತ್ತು. ಹೊನ್ನಾಪುರ ಗ್ರಾಮದ ಮತಗಟ್ಟೆಯಲ್ಲಿ ವಯೋವೃದ್ಧರಾದ ಗೌರವ್ವ ಬಡಿಗೇರ, ನೀಲಪ್ಪ ಸುಣಗಾರ ಅವರಿಗೆ ಸ್ವಯಂ ಸೇವಕರು, ವಾಹನದೊಂದಿಗೆ ಸಹಾಯ ಮಾಡಿದ್ದನ್ನು ಕಂಡು ಹಿರಿಯ ಮತದಾರರು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಸ್ವೀಪ್ ಸಮಿತಿಯು ಆಟೋ ರಿಕ್ಷಾ, ಮ್ಯಾಕ್ಸಿ ಕ್ಯಾಬ್, ಓಲಾ ಕ್ಯಾಬ್ ಹಾಗೂ ಗಾಲಿ ಖುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಚುನಾವಣಾ ಆಯೋಗ ಈ ಬಾರಿ ಮಾಡಿದ ವಿಶೇಷ ಸೌಲಭು ಹಾಗೂ ಜಿಲ್ಲಾಡಳಿತ ಕೈಗೊಂಡ ಕಾಳಜಿಗಳ ಬಗ್ಗೆಮತದಾರರು ವೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243