ಲೈಫ್ ಸ್ಟೈಲ್
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
- ಸಂಜಯ್ ಹೊಯ್ಸಳ
ಕೆನ್ನಾಯಿಗಳು ಕಾಡಿನ ಬೇಟೆಗಾರ ಪ್ರಾಣಿಗಳಲ್ಲಿ ಅತ್ಯಂತ ನಿಷ್ಣಾತ, ಅತ್ಯಂತ ಯಶಸ್ವಿ ಬೇಟೆಗಾರ ಪ್ರಾಣಿಗಳು. ಅತ್ಯಂತ ಬಲಶಾಲಿ ಪ್ರಾಣಿಯಾದ ಹುಲಿಗಳ ಬೇಟೆಯ ಯಶಸ್ಸಿನ ಸರಾಸರಿಯೆ ಕೇವಲ 5-10% ಇರುವಾಗ ಕೆನ್ನಾಯಿಗಳ ಈ ಯಶಸ್ಸಿನ ಪ್ರಮಾಣ ಶೇ.70-80 ಆಗಿರುವುದು ಅವುಗಳ ಬೇಟೆಯ ಚಾಕಚಕ್ಯತೆಗೆ, ಒಗ್ಗಟ್ಟಿನ ಬೇಟೆಗಿರುವ ಮಹತ್ವಕ್ಕೆ ಕನ್ನಡಿ ಹಿಡಿಯುತ್ತದೆ.
ರಾಜಸ್ಥಾನದ ಈ ಕೆಳಗಿನ ಕಲಾಕೃತಿ ಕೆನ್ನಾಯಿಗಳ ಗುಂಪು ಕಾಡಿನ ರಾಜ ಎನಿಸಿದ ಹುಲಿಯನ್ನು ಹೇಗೆ ಬೀತಿಗೊಳಿಸಿವೆ ಎಂಬುದನ್ನು ಸೂಚಿಸುತ್ತದೆ; ಜೊತೆಜೊತೆಗೆ “ಬೇಟೆಗಾರನನ್ನ ಬೇಟೆಯಾಡೋ ರಣ ಬೇಟೆಗಾರ” ಎಂಬ ಅಭಿದಾನಕ್ಕೆ ತಾವು ಅತ್ಯಂತ ಸೂಕ್ತ ಅಭ್ಯರ್ಥಿ ಎನ್ನುವುದನ್ನು ನಿರೂಪಿಸುತ್ತವೆ.
ಕೆನ್ನಾಯಿ ಗಳ ಈ ರಣ ಬೇಟೆಗಾರ ಗುಣ ಹಿಂದಿನ ಬ್ರಿಟೀಷರ ಕಾಲದಲ್ಲಿ ಇವುಗಳ ಸಂತತಿಗೆ ತೊಡಕಾದದ್ದು ಈಗ ಇವುಗಳ ಕರಾಳ ಇತಿಹಾಸವಷ್ಟೆ. ಬ್ರಿಟೀಷರ ಕಾಲದಲ್ಲಿ ಅವರು ಇವುಗಳ ಬೇಟೆಯ ನಿಷ್ಣಾಣತೆಯನ್ನು ಕಂಡು ಇವು ಜಿಂಕೆಗಳನ್ನು ಹೆಚ್ಚಾಗಿ ಬೇಟೆಯಾಡಿ ನಮಗೆ ಬೇಟೆಯಾಡಿ ತಿನ್ನಲು ಜಿಂಕೆ ಇಲ್ಲದಂತೆ ಮಾಡುತ್ತವೆ ಎಂಬ ದುರಾಲೋಚನೆಯಿಂದಲೋ, ಎಙೊ ಹುಲಿಗಳಿಗೆ ಜಿಂಕೆ ಇಲ್ಲದಂತೆ ಮಾಡುತ್ತವೆ ಎಂಬ ಕಾರಣ ನೀಡಿ ಇವುಗಳನ್ನು Vermin’s (ಉಪದ್ರವಿ ಜೀವಿಗಳು) ಗುಂಪಿಗೆ ಇವುಗಳನ್ನು ಸೇರಿಸಿ, ಇವುಗಳನ್ನು ಕಂಡಲ್ಲಿ ಸಾಯಿಸಿವ, ಸಾಯಿಸಿದವರಿಗೆ ಇನಾಮು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಿದರಂತೆ! ಬ್ರಿಟಿಷರು ಹಾಕಿದ ಈ ನಿಯಮ ಸ್ವಾತಂತ್ರ್ಯ ಭಾರತದಲ್ಲೂ ಸ್ವಲ್ಪ ದಿನ ಮುಂದುವರೆದು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಂತರ ಮಾತ್ರ ಈ ಪರಿಪಾಠಕ್ಕೆ ಪೂರ್ಣ ವಿರಾಮ ಬಿದ್ದದೆ.
ಅಷ್ಟರಲ್ಲಾಗಲೇ ಇವುಗಳ ಸಂತತಿ ವ್ಯಾಪಕವಾಗಿ ಅವಸಾನ ವಾಗಿತ್ತು. ಕೆಳಗಿನ ಚಿತ್ರ ದೊರೆತ ರಾಜಸ್ಥಾನದ ರಣಥೋಂಬೂರ್ ಅರಣ್ಯದಲ್ಲಿ ಕಡೆಯ ಬಾರಿ ಕೆನ್ನಾಯಿ ಕಾಣಿಸಿದ್ದ 2004 ರಲ್ಲಿ. ನಂತರ ಇಡೀ ರಾಜಸ್ಥಾನದಲ್ಲಿ ಎಲ್ಲೂ ಕೆನ್ನಾಯಿ ಇಲ್ಲದ ವಿಚಾರ ತಿಳಿದು ಅಧಿಕೃತವಾಗಿ ರಾಜಸ್ಥಾನದ ಕೆನ್ನಾಯಿಗಳ ಸಂತತಿ ವಿನಾಶವಾದ ಸುದ್ದಿ ಪ್ರಕಟವಾಗುತ್ತದೆ. ಸ್ವಾತಂತ್ರ್ಯ ನಂತರ ರಾಜಸ್ಥಾನದಲ್ಲಿ ವಿನಾಶವಾದ ಏಕೈಕ ವನ್ಯಜೀವಿ ಸಂತತಿ ಕೆನ್ನಾಯಿಯಂತೆ.
ನಮ್ಮ ರಾಜ್ಯದಲ್ಲೂ ಬ್ರಿಟೀಷರ ಕಾಲದಲ್ಲಿ, ನಂತರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ವರುವ ತನಕ ಕೆನ್ನಾಯಿಗಳ ಹತ್ಯೆ ಇದ್ದುದ್ದರ ಬಗ್ಗೆ ದಾಖಲಾತಿ ಇದೆ. ಅದೃಷ್ಟಕ್ಕೆ ನಮ್ಮ ರಾಜ್ಯದಲ್ಲಿ ರಾಜಸ್ಥಾನದ ಪರಿಸ್ಥಿತಿ ಬಂದಿಲ್ಲ! ಸದ್ಯ ಇಡೀ ದೇಶದಲ್ಲಿ ಅತಿಹೆಚ್ಚು ಕೆನ್ನಾಯಿಗಳಿರುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕದ ಅಗ್ರಸಾಲಿನಲ್ಲಿದೆ. ಆದರೂ ಇತರ ವನ್ಯಜೀವಿಗಳಿಗೆ ಹೋಲಿಸಿದರೆ ಇವುಗಳ ಸಂತತಿ ಕಡಿಮೆಯೇ ಇದೆ ಎನ್ನಬಹುದು. ಹಾಗಾಗಿಯೇ ಹುಲಿ, ಚಿರತೆ, ಆನೆಗಳಿಗಿಂತ ಹೆಚ್ಚು ಅಪಾಯ ಎದುರಿಸುತ್ತಿರುವ ವನ್ಯಜೀವಿ ಸಂತತಿ ಇದಾಗಿದೆ ಎಂದು ಗುರ್ತಿಸಿರುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕೆನ್ನಾಯಿ, ಕಾಡುನಾಯಿ,dholes ,wilddog