ನೆಲದನಿ
‘ಕಾರ್ಮಿಕರ ಬದುಕಿನ ಬೆಳಕು’ ಬಾಬು ಜಗಜೀವನ್ ರಾಮ್
- ಸಿದ್ದು.ಮಾದರ, ವಿಜಯಪುರ
ವಿಶ್ವದಾದ್ಯಂತ ಮೇ 1ರಂದು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದ ಬಹುತೇಕ ರಾಷ್ಟ್ರಗಳ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಈ ದಿನದಂದು ಕಾರ್ಮಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ.
1886ರ ಮೇ1ರಂದು ಅಮೆರಿಕದಲ್ಲಿ ಕಾರ್ಮಿಕ ದಿನವನ್ನು ಮೊಟ್ಟಮೊದಲು ಆಚರಿಸಲಾಯಿತು. ಅಂದು ನಡೆದ ಸಭೆಯಲ್ಲಿ ಕಾರ್ಮಿಕರ ಕೆಲಸದ ಅವಧಿಯು 8 ಗಂಟೆಯಾಗಿರಬೇಕು ಎಂದು ನಿರ್ಧರಿಸಲಾಯಿತು. ಕಾರ್ಮಿಕ ಸಂಘಟನೆಯೊಂದು ಶಕ್ತವಾಗಿ ರೂಪುಗೊಳ್ಳುವ ಮುಂಚಿತವಾಗಿ ಜನರು 10 ರಿಂದ 16 ಗಂಟೆಗಳ ಕಾಲ ದುಡಿಯುತ್ತಿದ್ದರು. ಯಾವುದೇ ಸೌಲಭ್ಯಗಳಿಲ್ಲದೆ ಕಡಿಮೆ ವೇತನಕ್ಕೆ ಜನರು ಹೆಚ್ಚು ಕಾಲ ದುಡಿಯಬೇಕಿತ್ತು.
ಈ ಹತ್ಯಾಕಾಂಡ ಖಂಡಿಸಿ 1889ರಲ್ಲಿ ಪ್ಯಾರಿಸಿನಲ್ಲಿ ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ಮಾಡಲಾಯಿತು. ಮಾರುಕಟ್ಟೆಯ ಗೋಲಿಬಾರ್ನಲ್ಲಿ ಮೃತರಾದ ಕಾರ್ಮಿಕರ ನೆನಪಿಗಾಗಿ ಮೇ ಒಂದನ್ನು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಸಮ್ಮೇಳನದಲ್ಲಿ ನಿರ್ಧರಿಸಲಾಯಿತು.
ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದ್ದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್. 1923ರ ಮೇ1ರಂದು ಚೆನ್ನೈನಲ್ಲಿ ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್’ ಅಡಿಯಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಆ ಸಮಯದಲ್ಲಿ ಇದನ್ನು ‘ಮದ್ರಾಸ್ ಡೆ‘ ಎಂದು ಕರೆಯಲಾಗುತ್ತಿತು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಭಾರತ ದೇಶದ ಕಾರ್ಮಿಕ ಕಲ್ಯಾಣಕ್ಕಾಗಿ ದುಡಿದ ಸ್ವಾತಂತ್ರ್ಯ ಸಂಗ್ರಾಮದ ಉಜ್ಜಲ ಯೋಧ, ಹಸಿರು ಕ್ರಾಂತಿಯ ಹರಿಕಾರ, ನವಭಾರತದ ನಿರ್ಮಾಪಕ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರನ್ನು ಈ ಸಂದರ್ಭದಲ್ಲಿ ಸ್ಮರಣೆ ಮಾಡುತ್ತಾ…
ಜಗಜೀವನರಾಮ್, ಪಂಡಿತ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ,ಡಾ.ರಾಜೇಂದ್ರ ಪ್ರಸಾದ್ ಅವರೊಂದಿಗೆ ನಡುಗಾಲ ಸರ್ಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.(1943, ಸೆಪ್ಟೆಂಬರ್ 3). ಆಗ ಅವರ ವಯಸ್ಸು 38. ಸಚಿವ ಸಂಪುಟದಲ್ಲಿ ಅವರೇ ಅತ್ಯಂತ ಕಿರಿಯ ವ್ಯಕ್ತಿ. ಅವರು ಸಚಿವರಾಗಿದ್ದಾಗ ಮಾಲೀಕರು ಮತ್ತು ಕಾರ್ಮಿಕರ ಮಧ್ಯೆ ಮಧುರ ಸಂಬಂಧ ಏರ್ಪಡಿಸಿದರು. ಕಾರ್ಮಿಕರಿಗೆ ಕನಿಷ್ಠ ವೇತನ ಭವಿಷ್ಯ ನಿಧಿ,ರಾಜ್ಯವಿಮಾನಿಧಿ ಮೊದಲಾದ ಸೌಲಭ್ಯಗಳನ್ನು ಜಾರಿಗೊಳಿಸಿದರು.
ಜಗಜೀವನರಾಮ್ ಸಚಿವ ಸಂಪುಟದ ಸೇರಿದ್ದು ಶೋಷಿತ ವರ್ಗದ ಪ್ರತಿನಿಧಿಯಾಗಿ ಇದು ಸಹಜವಾಗಿಯೇ ಆ ವರ್ಗದ ಸಮುದಾಯದಲ್ಲಿ ಹರ್ಷ ತಂದಿತು. ಭಾರತೀಯ ಶೋಷಿತ ವರ್ಗಕ್ಕೆ ಸಂಕ್ರಮಣ ಕಾಲ ಆರಂಭವಾಯಿತು. ಎಂಬ ಶ್ಲಾಘನೆ ಎಲ್ಲಾ ಕಡೆಯಿಂದಲೂ ಕೇಳಿಬಂತು.
ಕಾರ್ಮಿಕರ ಬದುಕಿನ ಬೆಳಕು
ಜಗಜೀವನರಾಮ್ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದು 1946 ರಿಂದ 52 ರ ವರೆಗೆ ಕಾರ್ಮಿಕ ಸಚಿವರಾಗಿ ಅವರ ಸಾಧನೆ ಅನುಪಮವಾದದ್ದು. ಅದೊಂದು ಐತಿಹಾಸಿಕ ದಾಖಲೆ.. ಕಾರ್ಮಿಕ ವರ್ಗ ಅವರನ್ನು ತಮ್ಮ ಉದ್ಧಾರಕ ಎಂದೇ ಭಾವಿಸಿದ್ದಲ್ಲಿ ಆಶ್ಚರ್ಯವಿಲ್ಲ. 1931 ರ ರಾಯಲ್ ಸನ್ನದ್ದು ರದ್ದು ಜಾರಿಗೊಳಿಸಿದರು. ಹಾಗೆಯೇ ಮುಖ್ಯವಾದ ಇನ್ ವೆಸ್ಟಿಗೇಷನ್ ವರದಿಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದರು. ಕಾರ್ಮಿಕರ ಏಳಿಗೆಗೆ ಅನುಕೂಲವಾಗುವ ಹಲವಾರು ಕಾನೂನುಗಳನ್ನು ಜಾರಿಗೊಳಿಸಿ, ಅವರ ಹಿತಾಸಕ್ತಿ ರಕ್ಷಿಸಿದರು.
ಜಗಜೀವನರಾಮ್ ಕಾರ್ಮಿಕ ಸಚಿವರಾಗಿದ್ದಾಗ ಜಿನೆವಾಕ್ಕೆ ILO (ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನ) ಕ್ಕೆ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡರು. ಅಂತರಾಷ್ಟ್ರೀಯ ಕಾರ್ಮಿಕ ಸಂಘ ಏಷ್ಯಾ ಘಟಕದ ಅಧ್ಯಕ್ಷರಾಗಿ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಭಡ್ತಿ ಮೀಸಲಾತಿ ಜನಕ ಡಾ ಬಾಬು ಜಗಜೀವನ ರಾಮ್ ರವರು ಕಾರ್ಮಿಕ ಮಂತ್ರಿಯಾಗಿದ್ದಾಗ ರೂಪಿಸಿದ ಕಾಯ್ದೆಗಳು
- ಕಲ್ಲಿದ್ದಲು ಮತ್ತು ಅಭ್ರಕ ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ – 1946
- ಕೈಗಾರಿಕಾ ವಿವಾದ ಕಾಯ್ದೆ – 1947
- ಕನಿಷ್ಠ ಮಜೂರಿ ಕಾಯ್ದೆ – 1948
- ಇ.ಎಸ್. ಐ. ( ನೌಕರರ ರಾಜ್ಯ ವಿಮಾ) ಕಾಯ್ದೆ – 1948
- ಬೋನಸ್ ಯೋಜನೆ ಕಾಯ್ದೆ – 1948
- ಕಾರ್ಖಾನೆ ಕಾಯ್ದೆ – 1948
- ಹಡಗು ಕಟ್ಟೆ ಕಾರ್ಮಿಕರು ಕಾಯ್ದೆ – 1948
- ಭವಿಷ್ಯ ನಿಧಿ ಕಾಯ್ದೆ – 1952
- ಗಣಿ ಕಾಯ್ದೆ – 1952
- ಗುತ್ತಿಗೆ ದುಡಿಮೆ ಕಾಯ್ದೆ – 1966
ಕಾರ್ಖಾನೆಗಳು ಮತ್ತು ಇತರೆ ದುಡಿಮೆ ಕ್ಷೇತ್ರಗಳಲ್ಲಿ ಪರಿಶಿಷ್ಟರೇ ಅಧಿಕ ಸಂಖ್ಯೆಯ ಕಾರ್ಮಿಕರಿರುವುದರಿಂದ, ಅವರ ಕಲ್ಯಾಣಕ್ಕಾಗಿ ಬಾಬೂಜಿ ಕಾರ್ಮಿಕ ಮಂತ್ರಿಯಾಗಿದ್ದಾಗ ಕನಿಷ್ಠ ಕೂಲಿ ಮತ್ತು ಗೊತ್ತುವಳಿ ಕಾಯ್ದೆಯನ್ನು ಜಾರಿಗೆ ಕೊಟ್ಟರು. ಮತ್ತು ಕಾರ್ಮಿಕ ಭವಿಷ್ಯ ನಿಧಿ, ಇ.ಎಸ್. ಐ. ಆಸ್ಪತ್ರೆ ಸೌಲಭ್ಯ, ಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಲಗ್ನಕ್ಕೆ ಧನ ಸಹಾಯ ಮುಂತಾದ ಅನುಕೂಲಗಳನ್ಪು ಕಲ್ಪಿಸಿದರು.
ಗಣಿ ಕಾರ್ಮಿಕರ ಹಿತರಕ್ಷಣೆಗಾಗಿ ಆಯುಕ್ತರನ್ನು ನೇಮಕ ಮಾಡಿದರು ಮತ್ತು ಕಾರ್ಮಿಕ ನ್ಯಾಯ ಮಂಡಳಿಗಳನ್ನು ಅಸ್ತಿತ್ವಕ್ಕೆ ತಂದು ಕಾರ್ಖಾನೆಗಳನ್ನು ಏಕಾಏಕಿ ಮುಚ್ಚುವುದು ಮುಂತಾದ ಕಾನೂನು ವಿರೋಧಿ ಕ್ರಮಗಳಿಗೆ ಕಡಿವಾಣ ಹಾಕಿದರು. ಈ ಸಹಾಯಕ್ಕಾಗಿ ಗಣಿ ಕಾರ್ಮಿಕರು ಧನಬಾಧ್ ನಲ್ಲಿ ಜಗಜೀವನ ರಾಮ್ ನಗರ ಎಂಬ ಹೊಸ ಬಡಾವಣೆ ನಿರ್ಮಿಸಿ ಬಾಬೂಜಿಯವರ ಸ್ಮರಣೆಯನ್ನು ಶಾಶ್ವತಗೊಳಿಸಿದ್ದಾರೆ. ಬಾಬೂಜಿಯವರನ್ನ “ಕಾರ್ಮಿಕ ಕಾಯ್ದೆಗಳ ಶಿಲ್ಪಿ” ಎಂದೇ ದೇಶ ಗೌರವದಿಂದ ಕರೆಯಿತು.
ಭಾರತದಲ್ಲಿ ಪ್ರಪ್ರಥಮ ಬಾರಿಗೆ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾನೂನು ರಚಿಸಿದ್ದು ಬಾಬೂಜೀ ಅವರ ಹೆಗ್ಗಳಿಕೆ. ಕಾರ್ಮಿಕವರ್ಗ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅವರು ಹಲವು ವಿಧಾಯಕ ಕಾರ್ಯಕ್ರಮಗಳನ್ನು ಕೈಗೊಂಡರು.. ಕಾರ್ಮಿಕರಿಗೆ ಸಂಬಂಧಿಸಿದಂತೆ ಅನಂತರ ಬಂದ ಹಲವು ಕಾನೂನುಗಳಿಗೆ ಅವರು ಭದ್ರ ಬುನಾದಿ ಒದಗಿಸಿದರು. ಜಗಜೀವನ್ ರಾಮ್ ಅಂದು ಕಾರ್ಮಿಕರ ಬಗ್ಗೆ ಕೈಗೊಂಡ ದೃಢ ನಿರ್ಧಾರಗಳು ಭಾರತೀಯ ಕಾರ್ಮಿಕರ ಬಾಳು ಬಂಗಾರವಾಗಲು ಸಾಧ್ಯವಾಯಿತು.
ನಾವುಗಳು ಬಾಬಾಸಾಹೇಬರು ಹಾಗೂ ಬಾಬೂ ಜೀ ರವರ ಭಾರತ ದೇಶಕ್ಕೆ ನೀಡಿರುವ ಕೊಡುಗೆಯನ್ನು ನಾವುಗಳು ಸ್ಮರಿಸಬೇಕು. ನಮ್ಮ ವಿಶ್ವ ರತ್ನ , ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ರವರ ಪುಣ್ಯದ ಪಲ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಿಗಜೀವನ್ ರಾಮ್ ರವರು ರಾಜಕೀಯವಾಗಿ ನಿಮ್ನ ವರ್ಗಗಳಿಗೆ ಎಲ್ಲ ಇಲಾಖೆಯಲ್ಲಿ ಸರ್ಕಾರದಿಂದ ಯೋಜನೆಯ ರೂವಾರಿಗಳು.
ರೈತರ ರೀತಿಯಲ್ಲಿ ಕಾರ್ಮಿಕರೂ ಸಹ ದೇಶದ ಬೆನ್ನೆಲುಬು ಇದ್ದಂತೆ, ದೇಶದ ಅಬಿವೃದ್ದಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಗಮನಾರ್ಹವಾಗಿದೆ. ಕಾರ್ಮಿಕರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಮೂಲಕ ಅವರ ಶ್ರಮಕ್ಕೆ ಗೌರವ ನೀಡದಂತಾಗುದುರ ಜೊತೆಗೆ ಅವರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರೆಪಣೆ ನೀಡಿದಂತಾಗುತ್ತದೆ, ಅಸಂಘಟಿತ ಕಾರ್ಮಿಕರಿಗೆ, ಸಂಘಟಿತ ಕಾರ್ಮಿಕರಿಗೆ ದೊರಕುವಂತಹ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ, ಸಂಬಂದಪಟ್ಟ ಎಲ್ಲಾ ಇಲಖೆಗಳು ಕಾರ್ಯೋನ್ಮುಖವಾಗಬೇಕು.
(ಸಿದ್ದು.ಮಾದರ
ಮಮದಾಪೂರ
ಬಬಲೇಶ್ವರ ತಾಲೂಕು
ವಿಜಯಪುರ
ಮೊ.ನಂ:- 9901941065
sidduymdr@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243