ಸಿನಿ ಸುದ್ದಿ

ಜೀವ ಬೆದರಿಕೆ : ಇದೆಲ್ಲಾ‌‌ ‘ಸುಳ್ಳು‌ ಸುದ್ದಿ’ ಅಂದ್ರು ಯಶ್..!

Published

on

ಸುದ್ದಿದಿನ, ಬೆಂಗಳೂರು : ಯಶ್​​ಗೆ ಜೀವ ಬೆದರಿಕೆ ಹಾಕಲಾಗಿತ್ತಂತೆ! ಎಂಬ ಮಾಹಿತಿಯನ್ನು ಆಧರಿಸಿ ನನ್ನ ಅನೇಕ ಹಿತೈಷಿಗಳು ನೇರವಾಗಿ ನನಗೆ ಫೋನ್​ ಮಾಡಿ, ಏನಿದು ಪ್ರಾಪಗಂಡಾ ಅಂತಾ ಕೇಳತೊಡಗಿದ್ದಾರೆ. ಇದರಿಂದ ನಾನು ಘಾಸಿಗೊಂಡಿದ್ದೇನೆ. ನಿಮ್ಮ ಪ್ರೀತಿ ಕಾಳಜಿಗೆ ನನ್ನ ಧನ್ಯವಾದ.. ಆದ್ರೆ ಇಂತಹ ಸುಳ್ಳುಸುದ್ದಿಗಳನ್ನು ಯಾರೂ ಹರಡಬೇಡಿ ಎಂದು ಯಶ್​ ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಯಾರೋ ತಪ್ಪು ಮಾಹಿತಿ ಕೊಡ್ತಿದ್ದಾರೆ, ಇದೆಲ್ಲಾ ಸುಳ್ಳು. ಜೀವ ಬೆದರಿಕೆ ಹಾಕಿರುವವರಾದರೂ ಯಾರು? ಈ ಸುದ್ದಿಗೆ ಮೂಲ ಏನು? ನನ್ನ ಪ್ರಕಾರ ಇಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ನಾನು ಗೃಹ ಸಚಿವರನ್ನೂ ಸಂಪರ್ಕಿಸಿದ್ದೇನೆ. ಅಂಥಾ ಯಾವುದೇ ಪ್ರಕರಣ ನಮ್ಮ ಪೊಲೀಸರ ಗಮನಕ್ಕೆ ಬಂದಿಲ್ಲ ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ. ಸೋ ಅನಗತ್ಯವಾಗಿ ‘ನನ್ನ ಹತ್ಯೆಗೆ ಯತ್ನಿಸಲಾಗಿತ್ತು’ ಎಂಬ ಮಾಹಿತಿ ಸತ್ಯಕ್ಕೆ ದೂರವಾದ ವಿಷಯ. ಇದನ್ನು ಇಲ್ಲಿಗೇ ಮುಕ್ತಾಯಗೊಳಿಸೋಣ. ಅಭಿಮಾನಿಗಳು ಯಾರೂ ಇದರ ಬಗ್ಗೆ ಆತಂಕಪಡುವುದು ಬೇಡ ಎಂದು ಯಶ್​​ ಹೇಳಿದ್ದಾರೆ.

ಈ ಹಿಂದೆ ನಾನು ಇಲ್ಲದಿದ್ದಾಗ ನಮ್ಮ ಮನೆಗೆ ಯಾರೋ ಬಂದಿದ್ದರು. ಅವರು ನನ್ನ ಮನೆ ಕಲ್ಲು ಬೀಸಿದ್ದರಂತೆ. ಅದು ನಮ್ಮ ತಂದೆಯವರ ಮೇಲೆ ಬಿದ್ದಿತ್ತು. ಅದು ಬಿಟ್ಟರೆ ಬೇರೆ ಯಾವುದೇ ಅಹಿತಕರ ಘಟನೆ ನಡೆದೇ ಇಲ್ಲ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ನನ್ನ ಖ್ಯಾತಿಗೆ ಹರ್ಟ್​​ ಆಗುವಂತಹ ಯಾವುದೇ ಸುದ್ದಿ ಹರಡಬೇಡಿ ಎಂದು ನಟ ಯಶ್​​ ಕೋರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version