ದಿನದ ಸುದ್ದಿ
ಎತ್ತಿನ ಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿ ; ಡಾ. ಕೆ. ಸುಧಾಕರ್
ಸುದ್ದಿದಿನ ಡೆಸ್ಕ್ : ಎತ್ತಿನ ಹೊಳೆ ಯೋಜನೆ (yettinahole project) ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಡಿಸೆಂಬರ್ ( December) ವೇಳೆಗೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವುದು ಶತಸಿದ್ಧ ಎಂದು ಚಿಕ್ಕಬಳ್ಳಾಪುರ ಜಿಲ್ಲಾಉಸ್ತುವಾರಿ ಆಗಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Minister Dr.K. Sudhakar) ಹೇಳಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ಜಲಜೀವನ್ ಮಿಷನ್ ( jal jeevan mission) ಯೋಜನೆಯಡಿ ಪ್ರತಿ ಮನೆಗೆ ಕೊಳವೆ ಮೂಲಕ ಶುದ್ಧ ನೀರು ಪೂರೈಸುವ 51 ಲಕ್ಷಕ್ಕೂ ಅಧಿಕ ಮೊತ್ತದ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದನ್ನೂ ಓದಿ | ಹಾವೇರಿ ವೈದ್ಯಕೀಯ ಕಾಲೇಜು ; ಎಂಬಿಬಿಎಸ್ ಸೀಟು ಪ್ರವೇಶಕ್ಕೆ ಅವಕಾಶ
ಜಲಜೀವನ್ ಮಿಷನ್ ಯೋಜನೆಗೆ ರಾಜ್ಯದಲ್ಲಿ ಕಳೆದ 4 ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ 54 ಗ್ರಾಮಗಳ ಪ್ರತಿ ಮನೆಗೆ ಕೊಳವೆ ಮೂಲಕ ನೀರು ಪೂರೈಸುವುದಕ್ಕಾಗಿ 44 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243