ಲೈಫ್ ಸ್ಟೈಲ್

ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ ಯಶಸ್ವಿ ಯೋಗ ದಿನಾಚರಣೆ

Published

on

ಜೂನ್ 21 ರಂದು ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗಿದೆ‌.2015ರಿಂದ ಆಚರಣೆಗೆ ಬಂದಿರುವುದು “ಯೋಗ ಡೇ” ಪ್ರಧಾನಿ ಮೋದಿ ಅವರ ಕನಸೂ ಹೌದು. ದೇಶವ್ಯಾಪ್ತಿಯಾಗಿ ಚಿನ್ನರು-ಹಿರಿಯರು ಎಂಬ ಬೇಧವಿಲ್ಲದೆ,  ಸರ್ವರೂ ಯೋಗ ಮಾಡಿ ರೋಗ ನಿವಾರಣೆ ಗೆ ಅಡಿಪಾಯ ಹಾಕಿದರು.

ಚಿತ್ರರಂಗದ ಗಣ್ಯರು, ತಾರಾಮಣಿಯರು, ಕ್ರೀಡಾಪಟುಗಳು ಸೋಷಿಯಲ್ ಮೀಡಿಯಾದಲ್ಲಿ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ ದ ಮಹತ್ವ ಸಾರುವ ಪೋಸ್ಟ್ ಮಾಡಿ ವೈರಲ್ ಆದರು.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/By97NtjBIXc/?utm_source=ig_web_button_share_sheet

ಬೆಂಗಳೂರಿಗರು ನಾವೇನು ಕಮ್ಮಿ ಎಂಬಂತೆ ,ವಾರದ ದಿನವಾದರೂ, ತಮ್ಮ ಕಚೇರಿ ಕೆಲಸದ ಮಧ್ಯೆಯೂ, ಎಲ್ಲೆಲ್ಲೂ ಯೋಗ ದಿನಾಚರಣೆ ಕಳೆ ಕಟ್ಟಿತ್ತು. ಹಲವಾರು ಖಾಸಗಿ ಕಂಪನಿಗಳು, ಶಾಲಾ-ಕಾಲೇಜು ಕ್ಯಾಂಪಸ್ ಗಳಲ್ಲಿ  ಆರೋಗ್ಯವರ್ಧಕ ಯೋಗಾಸನಗಳ ಮಹತ್ವದ ಅರಿವು ಮೂಡಿಸಲಾಯಿತು.

ಸದಾ ಕಾಲಾ ಮನೆ-ಮಕ್ಕಳು ಎಂದು ಬಿಜಿ ಆಗಿರುವ ಮಹಿಳೆಯರು ಕೂಡಾ ತಮ್ಮ ಕಿಟ್ಟಿ ಪಾರ್ಟಿಗಳಿಂದ ಹೊರಬಂದು ಯೋಗ ಆಸನಗಳನ್ನು ಅಪಾರ್ಟ್ಮೆಂಟ್ ಗಳಲ್ಲಿ ದಿನನಿತ್ಯ ವೂ ರೂಢಿಸಿಕೊಂಡಿರುವುದು ಸ್ವಾಗತಾರ್ಹ. ಆಧುನಿಕ ಫಿಟ್ನೆಸ್ ಸೆಂಟರ್ಗಳ ಜುಂಬಾ , ಏರೋಬಿಕ್ಸ್, ಜಿಮ್, ಪ್ರಭಾವಳಿಯ ನಡುವೆಯೂ ಭಾರತೀಯ ಸೊಗಡಿನ ಸಾಂಪ್ರದಾಯಿಕ ಯೋಗ ಆಸನಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿದ್ದಾರೆ ಹಲವಾರು ಮಹಿಳೆಯರು.

ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ, ಜೆಲ್.ಪಿ.ನಗರದ ಮಹಾವೀರ ರಿವಿಯೆರಾ ಅಪಾರ್ಟ್ಮೆಂಟ್ ನಿವಾಸಿಗಳು “ಯೋಗ ದಿನಾಚರಣೆಯನ್ನು” ಅರ್ಥಪೂರ್ಣ ವಾಗಿ ಆಚರಿಸಿದ್ದಾರೆ. ಅಪಾರ್ಟ್ಮೆಂಟ್ ಕಲ್ಚರ್ ಹೆಚ್ಚಿರುವ ಬೆಂಗಳೂರಿನಲ್ಲಿ, ಎಸ್.ಎಲ್.ವಿ ಸ್ಪ್ಲೆಂಡರ್, ಸೇರಿದಂತೆ ಹಲವಾರು ಕಡೆಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version