ದಿನದ ಸುದ್ದಿ

ಡಿ.09 | ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕೆಪಿಎಸ್ಸಿ ಕಾರ್ಯದರ್ಶಿಗಳು ‘ಯುವ ಸಂವಾದ’ ಕಾರ್ಯಕ್ರಮದಲ್ಲಿ ಭಾಗಿ : ಭವ್ಯ ನರಸಿಂಹಮೂರ್ತಿ

Published

on

ಸುದ್ದಿದಿನ, ಬೆಂಗಳೂರು : ಕರ್ನಾಟಕ ಸ್ಟೇಟ್ ಕಾಂಪಿಟೇಟಿವ್ ಎಕ್ಸಾಮಿನೇಷನ್ ಆಸ್ಪಿರೆಂಟ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಹಂಪಿನಗರ ಪಶ್ಚಿಮ ವಲಯ ನಗರ ಕೇಂದ್ರೀಯ ಗ್ರಂಥಾಲಯದ ಸಭಾಂಗಣದಲ್ಲಿ ನಾಳೆ (ಡಿ.09) ಸಂಜೆ ನಡೆಯುವ ‘ ಯುವ ಸಂವಾದ’ ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಾದ ಸುರಾರ್ ವಿಕಾಸ್ ಕಿಶೋರ್ ಅವರು ಭಾಗಹಿಸಲಿದ್ದಾರೆ ಎಂದು ಅಸೋಸಿಯೇಷನ್ ನ ಅಧ್ಯಕ್ಷೆ ಭವ್ಯ ನರಸಿಂಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವಸಂವಾದ‌ ಕಾರ್ಯಕ್ರಮದಲ್ಲಿ ಸ್ಪರ್ಧಾ ಆಕಾಂಕ್ಷಿಗಳಿಗೆ ಇರುವ ಪರೀಕ್ಷೆ ಮತ್ತು ನೇಮಕಾತಿಗಳಲ್ಲಿ ಇರುವ ಗೊಂದಲ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೆಪಿಎಸ್ಸಿ ಕಾರ್ಯದರ್ಶಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದ್ದಾರೆ‌.

ಹಾಗೆಯೇ ‘ಯುವ ಸಂಸತ್ತು’ ಕಾರ್ಯಕ್ರಮದ ಮೂಲಕ ಸ್ಪರ್ಧಾತ್ಮಕ ನೇಮಕಾತಿ ಮತ್ತು ಪರೀಕ್ಷೆಗಳಲ್ಲಿ ಬದಲಾವಣೆ ತರಲು ಮಸೂದೆಗಳನ್ನು ಮಂಡಿಸಲು ಹಾಗೂ ನೇಮಕಾತಿಗೆ ಸಂಬಂಧಪಟ್ಟ ಸಾಮಾಜಿಕ ಪ್ರಾಮುಖ್ಯತೆಯುಳ್ಳ ವಿಷಯಗಳನ್ನು ಚರ್ಚಿಸಲು ಆಕಾಂಕ್ಷಿಗಳಿಗೆ ನೇರ ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶ್ರೀ. ಎಂ. ಕೃಷ್ಣಪ್ಪ,ಮಾಜಿ ಸಚಿವರು ಮತ್ತು ಶಾಸಕರು, ನಿವೃತ್ತ ನ್ಯಾಯಮೂರ್ತಿ ಶ್ರೀ ವಿ. ಗೋಪಾಲ ಗೌಡ, ಸರ್ವೋಚ್ಛ ನ್ಯಾಯಾಲಯ ಶ್ರೀ ಆರ್. ಶ್ರೀಧರ್ , ಅಧ್ಯಕ್ಷರು ಪ್ರೆಸ್ ಕ್ಲಬ್ ಬೆಂಗಳೂರು: ಶ್ರೀ ಶಶಿಕಾಂತ್ ಸೆಂಥಿಲ್ ರವರು, ಮಾಜಿ ಭಾ. ಅ. ಸೇ ಭಾಗವಹಿಸಲಿದ್ದಾರೆ‌. ಈ ಕಾರ್ಯಕ್ರಮದಲ್ಲಿ 2020ನೇ ಸಾಲಿನ KAS GP ಸಾಧಕರಿಗೆ ಸನ್ಮಾನ ಮಾಡಲಾಗುವು ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version