ದಿನದ ಸುದ್ದಿ
ದಾವಣಗೆರೆ | ಅ.15 ರಂದು ಬಸವಾದಿ ಶರಣ ದರ್ಶನ ಕಾರ್ಯಕ್ರಮ ; ‘ಲೀಕ್ ಔಟ್’ ನಾಟಕ ಪ್ರದರ್ಶನ
ಸುದ್ದಿದಿನ,ದಾವಣಗೆರೆ: ಸಾಣೆಹಳ್ಳಿಯ ಶಿವಸಂಚಾರ ಬೆಳ್ಳಿಹಬ್ಬದ ಪ್ರಯುಕ್ತ ‘ಬಸವಾದಿ ಶರಣರ ದರ್ಶನ’ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ತಂಡಗಳನ್ನು ಆಯ್ಕೆ ಮಾಡಿ ಶರಣರ ಕುರಿತಂತ ನಾಟಕಗಳನ್ನು ನೀಡಿ, ಒಂದು ತಿಂಗಳ ಕಾಲ ಸದರಿ ನಾಟಕದ ತರಬೇತಿ ನಂತರ ಪ್ರದರ್ಶನ ಮಾಡುವಂತೆ ಆಯೋಜಿಸಿದೆ.
ದಾವಣಗೆರೆ ಜಿಲ್ಲೆಯ ಪರವಾಗಿ ರಂಗ ಅನಿಕೇತನ ದಾವಣಗೆರೆ ತOಡ ಆಯ್ಕೆ ಆಗಿದೆ. ಒಂದು ತಿಂಗಳ ಕಾಲ ನಾಟಕದ ತರಬೇತಿ,ನಂತರ ಒಂದೇ ಕಾಲಕ್ಕೆ ಪ್ರದರ್ಶನ ರಾಜ್ಯದೆಲ್ಲೆಡೆ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಭಾನುವಾರ ಸಂಜೆ 5:30 ಗಂಟೆಗೆ ವನಿತಾ ಸಮಾಜ, ಪಿ.ಜೆ ಬಡಾವಣೆ, ದಾವಣಗೆರೆ ಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಂಗಕರ್ಮಿ, ಚಲನಚಿತ್ರ ನಟಿ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ಉದ್ಘಾಟನೆ ಮಾಡಲಿದ್ದಾರೆ. ಹಾಗೂ ಅಕ್ಷತಾ ಪಾಂಡವಪುರ ಅವರ ರಂಗಪ್ರಸ್ತುತಿ ‘ಲೀಕ್ ಔಟ್’ ನಾಟಕ ಕೂಡ ಪ್ರದರ್ಶನಗೊಳ್ಳಲಿದೆ. ದಾವಣಗೆರೆಯ
ರಂಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243