ದಿನದ ಸುದ್ದಿ

ಎಸಿಬಿ ಬಲೆಗೆ ಮಹಿಳಾ ಟ್ರಾಫಿಕ್ ಇಸ್ಪೆಕ್ಟರ್

Published

on

ಸುದ್ದಿದಿನ, ಬೆಂಗಳೂರು: ಇಪ್ಪತ್ತು ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮಹಿಳಾ ಟ್ರಾಫಿಕ್‌ ಇಸ್ಪೆಕ್ಟರ್ ಹಂಸವೇಣಿ ಲಂಚ ಸ್ವೀಕರಿಸುತ್ತಿದ್ದಾಗಲೆ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆದಿದೆ.

ಗ್ಯಾಸ್ ಪೈಪ್ ಲೈನ್ ಗೆ ರಸ್ತೆ ಬದಿಯಲ್ಲಿ ಕೆಲಸ ಮಾಡಲು ಮಂಜೂರಾದ ಯೋಜನೆಗೆ ರಸ್ತೆ ಬದಿ ಅಗೆಯಲು GAIL ಕಂಪನಿ ಅಧಿಕಾರಿಗಳು.ಸಿಬ್ಬಂದಿ ಮುಂದಾಗಿದ್ದರು.ರಸ್ತೆ ಬದಿ ಅಗೆದು ಕೆಲಸ ಮಾಡಲು ಸಂಚಾರಿ ಪೊಲೀಸರ ಅನುಮತಿ ಸಹ ಪಡೆಯಬೇಕಿತ್ತು.ಅದಕ್ಕೆ ಅನುಮತಿ ನೀಡಲು ಸಂಚಾರಿ ಇನ್ಸ್ಪೆಕ್ಟರ್ ಹಂಸ ವೇಣಿ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿ ದ್ದಿದ್ದಾರೆ.

ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.GAIL ಕಂಪನಿ ಅಧಿಕಾರಿಗಳು ಪೊಲೀಸರ ಲಂಚದ ಬಗ್ಗೆ ಎಸಿಬಿಗೆ ದೂರು ನೀಡಿದ್ದರು.ಇಂದು 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಂಚಾರಿ ಇನ್ಸ್ ಪೆಕ್ಟರ್ ಹಂಸವೇಣಿ ಅವರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ವಶಕ್ಕೆ ತಗೆದುಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version