ದಿನದ ಸುದ್ದಿ
ಭೀಕರ ರಸ್ತೆ ಅಪಘಾತದಲ್ಲಿ ಶಾಸಕ ಸಹೋದರನ ಪುತ್ರ ದುರ್ಮರಣ
ರಾಯಚೂರು: ಮದಗಲ್ ಪಟ್ಟಣದ ಡಾಬಾ ಹತ್ತಿರ ತಡರಾತ್ರಿ ನಡೆದ ಘಟನೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಸಹೋದರ ಶರಣಗೌಡ ಬಯ್ಯಾಪುರ ಅವರ ಪುತ್ರ ಮೃತಪಟ್ಟಿದ್ದಾರೆ.
ಲಿಂಗನಗೌಡ (೨೩) ಸಾವನ್ನಪ್ಪಿದ ಯುವಕ. ಮರಕ್ಕೆ ಕಾರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಒಬ್ಬ ಸಾವು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಧ್ಯಾಹ್ನ ಬಯ್ಯಾಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ. ಮದಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.