ದಿನದ ಸುದ್ದಿ

ಚಿತ್ರದುರ್ಗ : ಭೀಕರ ಅಪಘಾತ ; ಮೂವರು ಸಾವು

Published

on

ಸುದ್ದಿದಿನ,ಚಿತ್ರದುರ್ಗ : ಜಿಲ್ಲೆಯ ಚಿಕ್ಕಬೆನ್ನೂರು ಹೊರವಲಯದಲ್ಲಿ ಇಂದು ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಲಾರಿ ಮತ್ತು ಪ್ರಯಾಣಿಕರ ಕಾರಿನ ನಡುವೆ ಈ ಅಪಘಾತವಾಗಿದೆ. ವೇಗವಾಗಿ ಚಲಿಸುತ್ತಿದ್ದ ಲಾರಿಯ ಟೈಯರ್ ಒಡೆದು ಅಡ್ಡಾದಿಡ್ಡಿ ಚಲಿಸಿದ್ದರಿಂದ ಈ ದುರಂತ ಸಂಭವಿಸಿದೆ.

ಕಾರಿನಲ್ಲಿದ್ದವರು ಬೆಂಗಳೂರಿನಿಂದ ಗೋವಾಗೆ ಪ್ರವಾಸ ಹೊರಟಿದ್ದರು. ಗಾಯಗೊಂಡವರಿಗೆ ದಾವಣಗೆರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version