ದಿನದ ಸುದ್ದಿ
ಚಿತ್ರದುರ್ಗ : ಚಿತ್ರಹಳ್ಳಿ ಬಳಿ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ, ಇಬ್ಬರು ಸಾವು
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಬಳಿ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ಮಲ್ಕಾಪುರ ಗ್ರಾಮಸ ಪಾಲಯ್ಯ (28), ವಿಜಿಯಪ್ಪ (30) ಇವರು ಸಾವನ್ನಪ್ಪಿದ್ದು, ಎತ್ತಿನಗಾಡಿಯಲ್ಲಿದ್ದ 7 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೊಳಲ್ಕೆರೆ ತಾಲೂಕಿನ ಮಲ್ಕಾಪುರದಿಂದ ಚಿತ್ರಹಳ್ಳಿಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಇವರು ಚಿತ್ರಹಳ್ಳಿಯ ಚಿತ್ರಲಿಂಗೇಶ್ವರ ಅಂಬಿನೋತ್ಸವಕ್ಕೆ ತೆರಳುವ ವೇಳೆ ತಡರಾತ್ರಿ 1 ಗಂಟೆ ಸುಮಾರಿಗೆ ಅಪಘಾತವಾಗಿದೆ.ಬಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401