ದಿನದ ಸುದ್ದಿ
ಅಪಘಾತ | ಗೋವಾಕ್ಕೆ ಹೊರಟಿದ್ದ ದಾವಣಗೆರೆ ಲೇಡಿಸ್ ಕ್ಲಬ್ ನ 13 ಮಂದಿ ದುರ್ಮರಣ
ಸುದ್ದಿದಿನ,ಧಾರವಾಡ: ದಾವಣಗೆರೆಯಿಂದ ಗೋವಾಕ್ಕೆ ಟೆಂಪೋ ಟ್ರಾವೆಲರ್ ನಲ್ಲಿ ಹೋಗುತ್ತಿದ್ದ ಸಂದರ್ಭ, ಟೆಂಪೋ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಒಟ್ಟು 13 ಜನ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಹೊರವಲಯದ ಇಟ್ಟಿಗಟ್ಟಿಯ ಬೈಪಾಸ್ ಹತ್ತಿರ ಬೆಳಗಿನ ಜಾವ ನಡೆದಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ದಾವಣಗೆರೆಯ ಲೇಡಿಸ್ ಕ್ಲಬ್ ನ ವತಿಯಿಂದ ಒಟ್ಟು 13 ಜನ ಮಹಿಳೆಯರು ಗೋವಾಕ್ಕೆ ಹೊರಟಿದ್ದು, ಧಾರವಾಡ ಜಿಲ್ಲೆಯ ಹೊರವಲಯದ ಇಟ್ಟಿಗಟ್ಟಿಯ ಬೈಪಾಸ್ ಹತ್ತಿರ ಬೆಳಗ್ಗೆ 3.30 ರ ಸುಮಾರು ಎದುರಿನಿಂದ ಬಂದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ರಾಜೇಶ್ವರಿ, ಡಾ .ವೀಣಾ ಪ್ರಕಾಶ್, ಮಂಜುಳಾ ಎಂಬುವರು ಹಾಗು ಟಿಪ್ಪರ್ ಚಾಲಕ ಸೇರಿದಂತೆ 10 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಟ್ಟು 13 ಜನ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243