ದಿನದ ಸುದ್ದಿ

ನ್ಯಾಯಾಧೀಶರ ಮುಂದೆ ಬ್ಲೇಡ್ ನಿಂದ ಕುತ್ತಿಗೆ ಕುಯ್ದುಕೊಂಡ ಆರೋಪಿ..!

Published

on

ಸುದ್ದಿದಿನ, ಬೆಂಗಳೂರು : ನ್ಯಾಯಾಧೀಶರ ಮುಂದೆ ಬ್ಲೇಡ್ ನಿಂದ ಕುತ್ತಿಗೆ ಕುಯ್ದುಕೊಂಡಿದ್ದಾನೆ ಆರೋಪಿ ವಿನೋದ್ ಅಲಿಯಾಸ್ ವಿನೋದ್ ಕುಮಾರ್. ಬೆಂಗಳೂರಿನ ಸೆಷನ್ಸ್ ಕೋರ್ಟ್ ಹಾಲ್ 54 ನಲ್ಲಿ ಘಟನೆ ನಡೆದಿದೆ.

ಈತ ಪೋಕ್ಸೋ ಕಾಯಿದೆ ಅಡಿಯಲ್ಲಿ ಆರೋಪಿ ಅರೆಸ್ಟ್ ಅಗಿದ್ದ. ಹೆಣ್ಣೂರು ಪೊಲೀಸರಿಂದ ಅರೋಪಿ ವಿನೋದ್ ಅರೆಸ್ಟ್ ಮಾಡಲಾಗಿತ್ತು. ಇವತ್ತು ಪ್ರಕರಣ ಎವಿಡೆನ್ಸ್ ಇತ್ತು ಆ ಕಾರಣಕ್ಕೆ ಕೋರ್ಟ್ ಗೆ ಕರೆತರಲಾಗಿತ್ತು.‌ನನ್ನ ಕೇಸ್ ಬೇಗ ತೀರ್ಮಾನ ಅಗುತ್ತಾ ಇಲ್ವಾ,‌ನನಗೆ ಬೇಲ್ ಸಿಗುತ್ತಾ ಇಲ್ವಾ ಅಂತ ಹೆದರಿ ಬ್ಲೇಡ್ ಹಾಕಿಕೊಂಡಿದ್ದಾನೆ ವಿನೋದ್.

ಕುತ್ತಿಗೆ ಕುಯ್ದುಕೊಳ್ಳಲು ಯತ್ನಿಸಿದ ಆರೋಪಿಯನ್ನು‌ ರಕ್ಷಿಸಿದ ಪೊಲೀಸ್ ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಯಿತು.ಕುತ್ತಿಗೆಯಲ್ಲಿ ಸಣ್ಣಪ್ಮಮಾಣದ ಗಾಯಗಳಾಗಿದ್ದವು.‌ಚಿಕಿತ್ಸೆ ಕೊಡಿಸಿ ಮತ್ತ ನ್ಯಾಯಾಧೀಶರ‌ ಮುಂದೆ ಹಾಜರಪಡಿಸಿದ ಪೊಲೀಸರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version